ಬಾಲಿವುಡ್‌ನತ್ತ ರಿಷಬ್ ಶೆಟ್ಟಿ- ಐತಿಹಾಸಿಕ ಪಾತ್ರದಲ್ಲಿ ಕಾಂತಾರ ಶಿವ

Public TV
1 Min Read

ರಿಷಬ್ ಶೆಟ್ಟಿ (Rishab Shetty) ಬಾಲಿವುಡ್‌ಗೆ (Bollywood) ಹಾರುವುದು ಖಚಿತ. ‘ಲಗಾನ್’ ಚಿತ್ರ ಸಾರಥಿ ಅಶುತೋಶ್ ಗೌರೀಕರ್ (Ashutosh Gowariker) ನಿರ್ದೇಶಕ. ಇಷ್ಟೇ ಸುದ್ದಿ ಹೊರ ಬಿದ್ದಿತ್ತು. ಆದರೀಗ ಅದರ ಕಥೆ, ಬಜೆಟ್ ಇತ್ಯಾದಿ ಮಾಹಿತಿ ಸಿಕ್ಕಿದೆ. ಹೇಗಿರಲಿದೆ ಕಾಂತಾರ ಶಿವನ ಬಾಲಿವುಡ್ ಎಂಟ್ರಿ? ಅದ್ಯಾವ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ? ಇಲ್ಲಿದೆ ಮಾಹಿತಿ.

ರಿಷಬ್ ಶೆಟ್ಟಿ ಸದ್ಯಕ್ಕೆ ಕಾಂತಾರ-2 (Kantara 2) ಬಿಟ್ಟು ಬೇರೇನೂ ಯೋಚಿಸುತ್ತಿಲ್ಲ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಶೂಟಿಂಗ್ ಹೊರಡೋದು ಬಾಕಿ. ಈ ನಡುವೆಯೇ ಬಾಲಿವುಡ್‌ನ ಅಶುತೋಶ್ ಗೌರೀಕರ್ ಸಿನಿಮಾಕ್ಕೆ ಬುಕ್ ಆಗಿದ್ದಾರೆ. ಇದೊಂದು ಐತಿಹಾಸಿಕ ಕತೆ. ದಕ್ಷಿಣ ಭಾರತವನ್ನು ಆಳಿದ ರಾಜನೊಬ್ಬನ ಬದುಕಿನ ಸತ್ಯ ಘಟನೆ ಆಧರಿಸಿದೆ. ಈ ಪಿರಿಯಾಡಿಕ್ ಕತೆಗೆ ಸುಮಾರು ನೂರೈವತ್ತರಿಂದ ಎರಡು ನೂರು ಕೋಟಿ ಕಾಸು ಸುರಿಯಲಾಗುತ್ತಿದೆ. ಇದನ್ನೂ ಓದಿ:ಬಿಕಿನಿ ಫೋಟೋ ಬಳಿಕ ಬೆಡ್‍ರೂಮ್ ಫೋಟೋ ಹಂಚಿಕೊಂಡ ಸೋನು

ಈ ಹಿಂದೆ ಲಗಾನ್, ಪಾನಿಪತ್, ಮೊಹೆಂಜೊದಾರೋದಂಥ ಪಿರಿಯಾಡಿಕ್ ಡ್ರಾಮಾ ಚಿತ್ರಿಸಿದ್ದ ಅಶುತೋಶ್ ಈಗ ರಿಷಬ್ ಹಿಂದೆ ಬಿದ್ದಿದ್ದಾರೆ. ತಲೈವಿ ನಿರ್ಮಾಪಕ ವಿಷ್ಣುವರ್ಧನ್ ಬಂಡವಾಳ ಹಾಕುತ್ತಿದ್ದಾರೆ. ಮುಂದಿನ ವರ್ಷ ಶೂಟಿಂಗ್ ಆರಂಭ. 2025ಕ್ಕೆ ಬಿಡುಗಡೆ. ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಉಳಿದ ವಿವರ ಸದ್ಯಕ್ಕಿಲ್ಲ. ಮೊಹೆಂಜೋದಾರೊ ತೊಂಬತ್ತು, ಪಾನಿಪತ್‌ಗೆ 100 ಕೋಟಿ ರೂ. ಸುರಿದಿದ್ದರು. ರಿಷಬ್ ಚಿತ್ರಕ್ಕೆ 200 ಕೋಟಿ ರೂ. ಆಗಲಿದೆಯಂತೆ. ಎಷ್ಟಾದರೂ ಐತಿಹಾಸಿಕ ಸಿನಿಮಾ ಅಲ್ಲವಾ?

ಕಾಂತಾರದಿಂದ ರಿಷಬ್ ಹೆಸರು ಇಲ್ಲಿವರೆಗೆ ಬಂದು ನಿಂತಿದೆ. ಬಾಲಿವುಡ್ ಕೂಡ ಮಣೆ ಹಾಕುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಕಾಡು ಶಿವನ ಖದರ್ ಆರಂಭವಾಗುತ್ತದಾ? ಸಮಯವೇ ಹೇಳಬೇಕು. ಅಂದ ಹಾಗೆ ರಿಷಬ್ ಮಾತ್ರ ಇದರ ಬಗ್ಗೆ ಮಾತಾಡುತ್ತಿಲ್ಲ. ಕಾರಣ ಮೊದಲು ಕಾಂತಾರ ಮುಗಿಯಲಿ. ಕಾಂತಾರ 2 ಬಳಿಕವೇ ಬೇರೆ ಪ್ರಾಜೆಕ್ಟ್‌ಗಳ ಬಗ್ಗೆ ರಿಷಬ್ ಶೆಟ್ಟಿ ಗಮನ ಹರಿಸುತ್ತಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್