ಮುತ್ತಪ್ಪ ರೈ ಕುಟುಂಬದ ಮೇಲೆ ಸಾಕಷ್ಟು ಜನರಿಗೆ ದ್ವೇಷ ಇದೆ: ಪ್ರಕಾಶ್‌ ರೈ

Public TV
2 Min Read

– ಚಾಲಕ ಬಸವರಾಜು ಕರೆತಂದು‌ ಬಿಡದಿ ಮನೆಯಲ್ಲಿ ಸ್ಥಳ ಮಹಜರು
– ವಿವಿಧ ಆಯಾಮಗಳಲ್ಲಿ ಪೊಲೀಸರ ತನಿಖೆ ಚುರುಕು

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ (Ricky Rai) ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು (Bidadi Police) ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ದೂರು ನೀಡಿದ ಕಾರು ಚಾಲಕ ಬಸವರಾಜುನನ್ನ ಈಗಾಗಲೇ ಸ್ಥಳಕ್ಕೆ ಕರೆತಂದು ಮಹಜರು ನಡೆಸುತ್ತಿದ್ದಾರೆ. ಬಸವರಾಜುನಿಂದ ಕಾರ್‌ ಡ್ರೈವ್‌ ಮಾಡಿಸಿ ಘಟನೆಯನ್ನ ಮರುಸೃಷ್ಠಿ ಮಾಡಿಸಿ, ಮಾಹಿತಿ ಕಲೆಹಾಕುತ್ತಿದ್ದಾರೆ. ಮತ್ತೊಂದೆಡೆ ಟವರ್ ಡಂಪ್ ಮೂಲಕ ಕಾಲ್ ಡಿಟೇಲ್ಸ್ ಹಾಗೂ ಲೊಕೇಶನ್ ಪರಿಶೀಲನೆ ನಡೆಸಲಾಗುತ್ತಿದೆ. ಘಟನೆ ನಡೆಯುವ ವೇಳೆ ಯಾರೆಲ್ಲಾ ಮೊಬೈಲ್ ಉಪಯೋಗಿಸಿದ್ದಾರೆ, ಯಾರಿಂದೆಲ್ಲಾ ಕರೆ ಬಂದಿವೆ, ಯಾರಿಗೆ ಕರೆ ಹೋಗಿದೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಶೂಟೌಟ್‌ ಕೇಸ್‌: ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿ ನಾಲ್ವರ ವಿರುದ್ಧ FIR

ಇನ್ನೂ ಘಟನೆ ಕುರಿತು ಬಿಡದಿಯಲ್ಲಿ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಮಾತನಾಡಿ, ರಾತ್ರಿ ನನಗೆ ವಿಚಾರ ಗೊತ್ತಾಯ್ತು, ಸೆಕ್ಯುರಿಟಿ ನನಗೆ ಫೋನ್ ಮಾಡಿದ್ರು. ಮುತ್ತಪ್ಪ ರೈ ಕಾಲದಿಂದಲೂ ಅವರ ಕುಟುಂಬದ ಮೇಲೆ ಸಾಕಷ್ಟು ಜನರಿಗೆ ದ್ವೇಷ ಇದೆ. ಆಸ್ತಿ ವಿಚಾರಕ್ಕೆ ಸಂಭಂಧಿಸಿದ ಒಂದಷ್ಟು ಇಶ್ಯೂ ಇತ್ತು. ರಿಕ್ಕಿ ಹೆಚ್ಚಿನ ಸಮಯ ಬಿಡದಿಯಲ್ಲಿ ಕಳೆಯುತ್ತಿದ್ರು. ಬೆಂಗಳೂರಿನ ಸದಾಶಿವ ನಗರದಲ್ಲೂ ಮನೆ ಇದೆ. ಬಿಡದಿ ಮನೆಯಲ್ಲಿ ಇಂಟೀರಿಯರ್ ಕೆಲಸ ನಡೆಯುತ್ತಿತ್ತು. ಅದನ್ನೂ ನೋಡೊಕೆ ರಿಕ್ಕಿ ಬಂದಿದ್ರು. ರಾತ್ರಿ ಇಲ್ಲಿಂದ ಹೋಗುವಾಗ ಯಾರೋ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮುತ್ತಪ್ಪ ರೈ ಮೇಲಿನ ದ್ವೇಷ ಮಗನ ಮೇಲೂ ಮುಂದುವರೆದಿರುವ ಸಾಧ್ಯತೆ ಇದೆ. ಯಾರೋ ಟಾರ್ಗೆಟ್ ಮಾಡಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ. ರಿಕ್ಕಿ ರೈಗೆ ಮುತ್ತಪ್ಪ ರೈ ಅವರು ಇದ್ದಾಗಲೇ ಮೊದಲ ಪತ್ನಿಯಿಂದ ಡೈವರ್ಸ್ ಆಗಿತ್ತು. 2ನೇ ಪತ್ನಿ ವಿದೇಶದವರು, ಅವರು ಮಗು ಜೊತೆ ವಿದೇಶದಲ್ಲೇ ಇದ್ದಾರೆ. ರಿಕ್ಕಿ ರೈ ಕೂಡ ಹೆಚ್ಚಿನ ಸಮಯ ವಿದೇಶದಲ್ಲೇ ಕಳೆಯುತ್ತಿದ್ರು ಅಂತ ಪ್ರಕಾಶ್‌ ರೈ ಹೇಳಿದ್ದಾರೆ.  ಇದನ್ನೂ ಓದಿ: ರಿಕ್ಕಿ ರೈ ಮೇಲೆ 2 ಸುತ್ತು ಗುಂಡಿನ ದಾಳಿ – ಡ್ರೈವಿಂಗ್‌ ಸೀಟ್‌ ಟಾರ್ಗೆಟ್‌ ಮಾಡಿ ಫೈರಿಂಗ್‌ ಮಾಡಿದ್ದು ಏಕೆ?

ಏನಿದು ಘಟನೆ?
ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಡರಾತ್ರಿ 12:50ರ ವೇಳೆಗೆ ಗುಂಢಿನ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ.  ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಫೈರಿಂಗ್ – ಕೂದಲೆಳೆ ಅಂತರದಲ್ಲಿ ಪಾರು

Share This Article