ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯ ಮೂಲಕ ಇಡೀ ದೇಶಕ್ಕೆ ಗೌರವ ತಂದಿದ್ದಾರೆ: ರವಿಚಂದ್ರನ್

Public TV
2 Min Read

ಬೆಂಗಳೂರು: ಲಹರಿ ಸಂಸ್ಥೆಗೆ ದೊಡ್ಡ ಇತಿಹಾಸ ಇದೆ. ಇಂದು ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅವರು ಇಡೀ ದೇಶಕ್ಕೆ ಗೌರವ ತಂದಿದ್ದಾರೆ ಎಂದು ನಟ ರವಿಚಂದ್ರನ್ ಹೇಳಿದರು.

ಲಹರಿ ಆಡಿಯೋ ಸಂಸ್ಥೆ ಬಗ್ಗೆ ಮಾತನಾಡಿದ ಅವರು, ಲಹರಿ ಸಂಸ್ಥೆ ಸಂಗೀತಕ್ಕೆ ಕೋಟಿ ಕೋಟಿ ಸುರಿದಿದ್ದಾರೆ. ಲಹರಿ ಸಂಸ್ಥೆಯ ಮಾಲೀಕ ಮನೋಹರ್ ಅವರು ಅಳೆದು ತೂಗಿ ವ್ಯವಹಾರ ಮಾಡುತ್ತಾರೆ. ಅಪ್ಪ ಕೊಟ್ಟ ಕೈ ಇದು, ಆ ಕೈಯಿಂದ ಯಾರನ್ನು ಬೆನ್ನು ತಟ್ಟಿದ್ರೋ ಅವರು ಎತ್ತರಕ್ಕೆ ಹೋಗುತ್ತಾರೆ ಎಂದರು.

ಕೆಜಿಎಫ್ 2 ಚಿತ್ರವನ್ನು ಸಿನಿಮಾ ಇಂದು ಇಡೀ ವಿಶ್ವ ಮಾತಾಡುತ್ತಿದೆ. ಕೆಜಿಎಫ್ ದಾಖಲೆ ಮುರಿಯೋದೆ ನಮ್ಮೆಲ್ಲರ ಗುರಿ ಆಗಿರಬೇಕು. ಕೆಜಿಎಫ್ ದಾಖಲೆ ಮಾಡಿದೆ. ಕೋಟಿ ಖರ್ಚು ಮಾಡಿದ್ದಾರೆ. ಅವರಿಗೆ ಟಿಕೆಟ್ 2 ಸಾವಿರ ತೆಗೆದುಕೊಳ್ಳುವ ಅಧಿಕಾರ ಇದೆ ಎಂದು ಸಿನಿಮಾ ಬಗ್ಗೆ ನಟ ಹೆಮ್ಮೆ ವ್ಯಕ್ತಪಡಿಸಿದರು.

ಯಾವಾಗಲೂ ನಾವು ಅದೇ ತರ ದೊಡ್ಡದಾಗಿಯೇ ಯೋಚನೆ ಮಾಡಬೇಕು. 40 ವರ್ಷದ ಹಿಂದೆ ನಾನು ಇದಕ್ಕೆ ಯೋಚನೆ ಮಾಡಿದ್ದು, ಇಂದು ಕೆಜಿಎಫ್ ನಿಂದ ಇಡೀ ಪ್ರಪಂಚ ನಮ್ಮ ಕಡೆ ತಿರುಗಿ ನೋಡಿದೆ. ಕೆಜಿಎಫ್ ಯಶಸ್ಸನ್ನು ನಾವೆಲ್ಲಾ ಸಂಭ್ರಮಿಸೋಣ ಎಂದು ರವಿಚಂದ್ರನ್ ಕರೆ ನೀಡಿದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

ಇದೇ ವೇಳೆ ಲಹರಿ ಸಂಸ್ಥೆ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿ, ಲಹರಿ ಸಂಸ್ಥೆ ನಮ್ಮಲ್ಲೂ ಒಳ್ಳೆಯ ಬೆಲೆಗೆ ಆಡಿಯೋ ಕೊಂಡುಕೊಳ್ಳುತ್ತಿದ್ದರು. ಅವರು ಯಾಮಾರಿಸುತ್ತಿರಲಿಲ್ಲ, ಬಹಳ ಸುಲಭವಾಗಿ ಯಾಮಾರಿಸಬಹುದಿತ್ತು. ಆದರೆ ಅವರು ಹಾಗೆ ಮಾಡುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

ಬಳಿಕ ಶಿವಣ್ಣ ಜನುಮದ ಜೋಡಿ “ಇವಳ್ಯಾರೋ ಮಗಳೋ ಹಿಂಗಳವ್ಳಲ್ಲ” ಎಂಬ ಹಾಡು ಹಾಡಿ ರಂಜಿಸಿದರು. ಅಲ್ಲದೆ “ರಾಜ್ ಕುಮಾರ್ ಮಗನೋ ಶಿವರಾಜ್ ಕುಮಾರ್ “ಎಂದು ತಾವೇ ಲಿರಿಕ್ಸ್ ಬದಲಾಯಿಸಿಕೊಂಡು ಹಾಡಿದರು. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ: ಅಜಯ್ ದೇವಗನ್

ಕನ್ನಡದ ಪ್ರತಿಷ್ಠಿತ ಲಹರಿ ಸಂಸ್ಥೆ ‘ಗ್ರ್ಯಾಮಿ’ ಪ್ರಶಸ್ತಿ ಪಡೆದುಕೊಂಡಿದೆ. ಲಹರಿ ಸಂಸ್ಥೆಯಿಂದ ರಿಲೀಸ್ ಆಗಿದ್ದ “ಡಿವೈನ್ ಟ್ರೈಡ್ಸ್” ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದ್ದು, ಈ ವಿಶೇಷ ಆಲ್ಬಂ ಸಂಗೀತ ನಿರ್ದೇಶಕ ‘ರಿಕ್ಕಿಕೇಜ್’ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಪ್ರದಾನ ಮಾಡಿತ್ತು. ಈ ಸಂಬಂಧ ಇಂದು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ರಿಕಿ ಕೇಜ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್ . ಆರ್ ರಂಗನಾಥ್ ಹಾಗೂ ಸಿಇಓ ಅರುಣ್, ಸಿಎಂ ಬಸವರಾಜ್ ಬೊಮ್ಮಾಯಿ ಲಹರಿಯ ಸಾಧನೆಯನ್ನ ಸ್ಮರಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *