ಮೇ 1ರಿಂದ ‘ರಿಚರ್ಡ್ ಆಂಟನಿ’ ಶೂಟಿಂಗ್ ಶುರು: ನಟ ರಕ್ಷಿತ್ ಶೆಟ್ಟಿ

Public TV
1 Min Read

ಕ್ಷಿತ್ ಶೆಟ್ಟಿ (Rakshit Shetty) ನಟಿಸಿ,  ನಿರ್ದೇಶನ ಮಾಡುತ್ತಿರುವ ರಿಚರ್ಡ್ ಆಂಟನಿ (Richard Antony) ಸಿನಿಮಾದ ಶೂಟಿಂಗ್  (Shooting) ಇದೇ ಮೇ 1 ರಿಂದ ಶುರುವಾಗಲಿದೆ ಎಂದು ಸ್ವತಃ ರಕ್ಷಿತ್ ಅವರೇ ಮಾಹಿತಿ ನೀಡಿದ್ದಾರೆ. ನಿನ್ನೆ ಉಡುಪಿಯಲ್ಲಿ ಮತದಾನ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಕೆಲವೇ ದಿನಗಳಲ್ಲಿ ನಮ್ ಟೀಮ್ ಉಡುಪಿ ತಲುಪಲಿದೆ. ಮೇ 1 ರಿಂದ ಚಿತ್ರೀಕರಣ ಶುರು ಮಾಡುತ್ತೇವೆ ಎಂದಿದ್ದಾರೆ.

1980-90 ರ ದಶಕದಲ್ಲಿ ನಡೆಯುವ ಕಥೆ ಇದಾಗಿದ್ದರಿಂದ ಆಯಾ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನವನ್ನೂ ಅವರು ಮಾಡಲಿದ್ದಾರಂತೆ. ಹಾಗಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಶೇಕಡಾ 50 ರಷ್ಟು ಚಿತ್ರೀಕರಣ ಉಡುಪಿ ಸುತ್ತಮುತ್ತ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಿನಿಮಾ ಕುರಿತು ಮಾಹಿತಿ ನೀಡಿದ್ದಾರೆ. ಆದರೆ, ನಿರ್ಮಾಣ ಸಂಸ್ಥೆಯ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಆದರೂ, ಈ ಹಿಂದೆ ಹೊಂಬಾಳೆ ಸಂಸ್ಥೆಯ ಆಪ್ತರು ಕೂಡ ಪಬ್ಲಿಕ್ ಟಿವಿ ಡಿಜಿಟೆಲ್ ಜೊತೆ ಮಾತಾಡ್ತಾ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಈ ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುವುದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹಲವು ತಿಂಗಳ ಹಿಂದೆಯೇ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು.ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿಯಾಗಿದ್ದರಿಂದ ಮುಹೂರ್ತಕ್ಕೆ ತಡವಾಗಿತ್ತು. ಸಪ್ತ ಸಾಗರದಾಚೆ ಶೂಟಿಂಗ್ ಮತ್ತು ಬಿಡುಗಡೆಯ ಎಲ್ಲ ಕೆಲಸಗಳನ್ನು ಮುಗಿಸಿ, ಸ್ಕ್ರಿಪ್ಟ್ ನಲ್ಲಿ ತೊಡಗಿದ್ದರು ರಕ್ಷಿತ್ ಶೆಟ್ಟಿ, ಈಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದೆ.

 

ಈ ನಡುವೆ ಹೊಂಬಾಳೆ ಮತ್ತು ರಕ್ಷಿತ್ ನಡುವೆ ಬಿರುಕುಉಂಟಾಗಿದ್ದು, ಬೇರೊಂದು ಸಂಸ್ಥೆಯು ರಿಚರ್ಡ್ ಆಂಟನಿ  ಚಿತ್ರವನ್ನು ನಿರ್ಮಾಣ ಮಾಡಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಆಪ್ತರೇ ಹೇಳುವಂತೆ, ‘ಸಿನಿಮಾ ಮುಹೂರ್ತಕ್ಕೆ ಹೊಂಬಾಳೆಯೇ ತಯಾರಿ ಮಾಡಿಕೊಳ್ಳುತ್ತಿದೆ ಅಂದ ಮೇಲೆ ಈ ಪ್ರಶ್ನೆಯೇ ಅಪ್ರಸ್ತುತ’ ಎನ್ನುತ್ತಾರೆ.

Share This Article