ನೀಲಿ ತಾರೆ ಮಿಯಾ ಜೊತೆ ತೆಲುಗಿನ ಡೈರೆಕ್ಟರ್ ಆರ್‌ಜಿವಿ

Public TV
1 Min Read

ತೆಲುಗು-ಹಿಂದಿ ಸಿನಿಮಾಗಳ ನಿರ್ದೇಶನದ ಮೂಲಕ ಸಂಚಲನ ಮೂಡಿಸಿರುವ ಆರ್‌ಜಿವಿ (Rgv) ಅವರು ಸದಾ ಒಂದಲ್ಲಾ ಒಂದು ರೀತಿಯಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡುವ ಮೂಲಕ ಇಂಟರ್‌ನೆಟ್ ಶೇಕ್ ಮಾಡ್ತಿರುತ್ತಾರೆ. ಇದೀಗ ನೀಲಿ ತಾರೆ ಜೊತೆಗಿನ ಫೋಟೋ ಹಂಚಿಕೊಂಡು ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಭೂರಿ ಭೋಜನ, ಭರ್ಜರಿ ತಯಾರಿ

ಒಂದು ಕಾಲದಲ್ಲಿ ತೆಲುಗು, ಹಿಂದಿ, ಕನ್ನಡ ಚಿತ್ರಗಳಿಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ನಿರ್ದೇಶನ ಮಾಡುವ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದರು. ಫೇಮ್ ಇಲ್ಲದೇ ಇರೋರಿಗೂ ಆರ್‌ಜಿವಿ ಆ್ಯಕ್ಷನ್ ಕಟ್ ಹೇಳಿದ್ರು ಅಂದರೆ ಆ ಯುವನಟ ರಾತ್ರೋ ರಾತ್ರಿ ಸ್ಟಾರ್ ಆಗ್ತಿದ್ರು. ಅಷ್ಟರ ಮಟ್ಟಿಗೆ ಕಂಟೆಂಟ್‌ನ ಹೀರೋ ಮಾಡಿ ಸಿನಿಮಾನ ಆರ್‌ಜಿವಿ ಗೆಲ್ಲಿಸುತ್ತಿದ್ರು. ಈಗ ಸಿನಿಮಾಗಿಂತ ಸೋಷಿಯಲ್ ಮೀಡಿಯಾದಲ್ಲಿನ ಫೋಟೋ, ಪೋಸ್ಟ್‌ಗಳ ಮೂಲಕ ಆರ್‌ಜಿವಿ ಸದ್ದು ಮಾಡ್ತಿದ್ದಾರೆ. ವಿವಾದಾತ್ಮಕ ಹೇಳಿಕೆಯಿಂದ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದುಯಿದೆ.

ಶಿವ, ರಕ್ತ ಚರಿತ್ರೆ, ಭೂತ್ ಅಂತಹ ಸಿನಿಮಾಗಳನ್ನ ನಿರ್ದೇಶನ ಮಾಡುವ ಸೈ ಎನಿಸಿಕೊಂಡಿದ್ದ ನಿರ್ದೇಶಕ ಆರ್‌ಜಿವಿ ಅವರು ಇತ್ತೀಚಿಗೆ ಅಮೆರಿಕಾಗೆ ಭೇಟಿ ನೀಡಿದ್ದಾರೆ. ಅಲ್ಲಿ ನೀಲಿ ತಾರೆ ಮಿಯಾ ಮಲ್ಕೋವಾ (Mia Malkova) ಅವರನ್ನ ಮೀಟ್ ಮಾಡಿದ್ದಾರೆ. ಈ ಹಿಂದೆ ಜಿಎಸ್‌ಟಿ ಎಂಬ ಬೋಲ್ಡ್ ಕಿರುಚಿತ್ರವನ್ನು ನೀಡಿದ್ದರು. ಅಂದು ಪರಿಚಯವಾದ ಸ್ನೇಹ ಸಂಬಂಧ ಇಂದಿಗೂ ಆ ಒಡನಾಟವಿದೆ. ಹಾಗಾಗಿ ಪೋರ್ನ್ ಸ್ಟಾರ್ ಮಿಯಾನ ಆರ್‌ಜಿವಿ ಮೀಟ್ ಮಾಡಿ ಖುಷಿಪಟ್ಟಿದ್ದಾರೆ. ಮಿಯಾ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯದಲ್ಲಿ ಶೇರ್ ಮಾಡಿದ್ದಾರೆ. ಎಂದಿನಂತೆ ಈ ಫೋಟೋಗೆ ನೆಟ್ಟಿಗರಿಂದ ನೆಗೆಟಿವ್ ಕಾಮೆಂಟ್ ಹರಿದು ಬರುತ್ತಿದೆ.

ಇನ್ನೂ ಆರ್‌ಜಿವಿ (Rgv) ಅವರು ಕನ್ನಡದ ಐಆ್ಯಮ್‌ಆರ್, ಕೋಬ್ರಾ, ಸೇರಿದಂತೆ ತೆಲುಗಿನ ಹಲವು ಸಿನಿಮಾಗಳಿವೆ. ಇತ್ತೀಚಿನ ವರ್ಷಗಳಲ್ಲಿ ಸಕ್ಸಸ್ ಸಿಗದೇ ಬೆಸತ್ತಿರೋ ಆರ್‌ಜಿವಿಗೆ ಮುಂದಿನ ಸಿನಿಮಾಗಳ ಮೂಲಕ ಸಕ್ಸಸ್ ಸಿಗುತ್ತಾ ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್