ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ – 16 ದಿನಗಳಿಂದ ಗುರುಮಠಕಲ್ ಬಸ್ ನಿಲ್ದಾಣದಲ್ಲೇ ಕುಟುಂಬ ವಾಸ

Public TV
1 Min Read

ಯಾದಗಿರಿ: ಜಮೀನು ವರ್ಗಾವಣೆಯ ಮೂಲ ನಕಲು ಪ್ರತಿಯನ್ನು ನೀಡಲು ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಹಿನ್ನೆಲೆ ಊರಿಗೆ ತೆರಳದೆ ಬಸ್ ನಿಲ್ದಾಣದಲ್ಲಿ ಕುಟುಂಬವೊಂದು ವಾಸ ಮಾಡುತ್ತಿದೆ.

ಜಿಲ್ಲೆಯ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಪ್ರಮಿಳಾ ವೆಂಕಟರೆಡ್ಡಿ ದಂಪತಿ ಕಳೆದ 16 ದಿನಗಳಿಂದ ವಾಸಮಾಡುತ್ತಿದ್ದಾರೆ. ಇವರು ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆಡಪಳ್ಳಿ ಗ್ರಾಮದವರು. ಹೈದರಾಬಾದ್‍ನಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಪ್ರಮಿಳಾಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪ್ರಮಿಳಾ ತವರು ಊರು ಗುರುಮಠಕಲ್ ತಾಲೂಕಿನ ಹಿಮಲಾಪುರ ಗ್ರಾಮ, ಪಿತ್ರಾರ್ಜಿತ ಆಸ್ತಿ ಪಡೆಯಲು ಜಮೀನಿನ ದಾಖಲೆಗಾಗಿ ಹೈದರಾಬಾದ್‍ನಿಂದ ಸೆ.6 ರಂದು ಗುರುಮಠಕಲ್‍ಗೆ ಬಂದಿದ್ದಾರೆ. ಇದನ್ನೂ ಓದಿ: ನಿಷ್ಪಕ್ಷಪಾತವಾದ ವರದಿ ಕೊಡಿ – ಆಧಿಕಾರಿಗಳಿಗೆ ಆಣೆ ಮಾಡಿಸಿದ ಗ್ರಾಮಸ್ಥರು

ತಹಶೀಲ್ದಾರ್ ಕಚೇರಿಗೆ ತೆರಳಿ ಜಮೀನಿನ ಮೂಲ ನಕಲು ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಸಿ 16 ದಿನಗಳಾದರೂ ಮೂಲ ನಕಲು ಪ್ರತಿ ನೀಡದೆ ಕಂದಾಯ ಇಲಾಖೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಗುರುಮಿಠಕಲ್ ಪಟ್ಟಣದಲ್ಲಿ ಪ್ರಮಿಳಾವರಿಗೆ ಯಾವುದೇ ಸಂಬಂಧಿಕರಿಲ್ಲ, ಹೋಟೆಲ್ ನಲ್ಲಿ ರೂಮ್ ಮಾಡುವಷ್ಟು ಶಕ್ತರಲ್ಲದ ಕಾರಣ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದು ಬೆಳಗ್ಗೆ ತಹಶೀಲ್ದಾರ್ ಕಚೇರಿ ಬಾಗಿಲು ಕಾಯುತ್ತಿದ್ದಾರೆ.  ಇದನ್ನೂ ಓದಿ: ಮಕ್ಕಳನ್ನು ವೈದ್ಯರಲ್ಲಿ ತೋರಿಸಲು ಪೋಷಕರ ನೂಕುನುಗ್ಗಲು

Share This Article
Leave a Comment

Leave a Reply

Your email address will not be published. Required fields are marked *