ಜಮೀರ್ ರೀತಿಯ ಹೊಗಳುಭಟ್ಟರ ಮಾತು ಕೇಳಬೇಡಿ: ಸಿದ್ದರಾಮಯ್ಯಗೆ ಸಿ.ಟಿ.ರವಿ ಸಲಹೆ

Public TV
1 Min Read

– ಕೆಳಗೆ ಬಿದ್ರೆ ಹೊಗಳುಭಟ್ಟರು ತುಳೀತಾರೆ
– ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳುವಂತೆ ಸಿಎಂಗೆ ಕಿವಿಮಾತು

ಬೆಂಗಳೂರು: ಜಮೀರ್ (Zameer Ahmed) ರೀತಿಯ ಹೊಗಳುಭಟ್ಟರ ಮಾತು ಕೇಳಬೇಡಿ. ರಾಜ್ಯದ ಹಿತದೃಷ್ಟಿಯಿಂದ ಯಾರು ಸಲಹೆ ಕೊಡ್ತಾರೋ ಅವರ ಮಾತು ಕೇಳಿ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ರಾಜೀನಾಮೆ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಸಲಹೆ ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ಗೋಸುಂಬೆ ಮಾತ್ರ ಬಣ್ಣ ಬದಲಾಯಿಸೋದ? ನೀವು ಹಾಗಾಗೋದು ಬೇಡ. ಇಲ್ಲ ನಾನು ಬಣ್ಣ ಬದಲಾಯಿಸೋನು, ನನಗೂ ಗೋಸುಂಬೆಗೂ ಸಂಬಂಧ ಇದೆ ಅಂದ್ರೆ ಏನೂ ಮಾಡೋಕ್ಕಾಗಲ್ಲ. ನನ್ನದು ಬಿಳಿ ಬಟ್ಟೆ ಅಂತೀರ, ಈಗ ನಿಮ್ಮ ಬಟ್ಟೆ ಬಿಳಿಯಾಗಿಲ್ಲ. ಮುಡಾದಲ್ಲಿ 830 ನಿವೇಶನ ರಿಯಲ್‌ಎಸ್ಟೇಟ್ ಬ್ರೋಕರ್‌ಗಳಿಗೆ ಮಾರಿದ್ರಿ. ನೀವು ಮಿಸ್ಟರ್ ಕ್ಲೀನಾ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿಎಂ ವಿರುದ್ಧ ಇಂದೇ ದಾಖಲಾಗುತ್ತಾ ಎಫ್‌ಐಆರ್? – ಸಿದ್ದರಾಮಯ್ಯ ಆಗ್ತಾರಾ ಎ1?

ಸಿದ್ದರಾಮಯ್ಯ ಇನ್ನೆಷ್ಟು ಬೆತ್ತಲಾಗಬೇಕು ಅಂತಾ ಬಯಸ್ತಿದ್ದಾರೆ? ತನಿಖೆ ಆಗಲೇಬೇಕು ಅಂತಾ ಕೋರ್ಟ್ ಸಹ ಹೇಳಿದೆ. ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿಸಿದ್ರಿ. ಈಗ ಹೈಕೋರ್ಟ್ ಜಡ್ಜ್ಗೆ ಏನ್ ಹೇಳ್ತೀರಿ ಎಂದು ಪ್ರಶ್ನಿಸಿದ್ದಾರೆ.

ಹೊಗಳುಭಟ್ಟರ ಮಾತನ್ನು ಕೇಳಬೇಡಿ ಸಿದ್ದರಾಮಯ್ಯ ಅವರೇ. ಹೊಗಳುಭಟ್ಟರು ಕೆಳಗೆ ಬಿದ್ರೆ ತುಳೀತಾರೆ. ಜಮೀರ್ ರೀತಿಯ ಹೊಗಳುಭಟ್ಟರ ಮಾತು ಕೇಳಬೇಡಿ. ರಾಜ್ಯದ ಹಿತದೃಷ್ಟಿಯಿಂದ ಯಾರು ಸಲಹೆ ಕೊಡ್ತಾರೋ ಅವರ ಮಾತು ಕೇಳಿ. ಅವರ ಅನುಕೂಲಕ್ಕೆ ತಕ್ಕಂತೆ ಹೊಗಳುಭಟ್ಟರು ಮಾತಾಡ್ತಾರೆ, ಮೊದಲು ತುಳಿಯೋದೇ ಅವರು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಕಾಂಗ್ರೆಸ್ ಸಿಎಂ ಬೆನ್ನಿಗೆ ನಿಂತಿದೆ, ರಾಜೀನಾಮೆ ನೀಡುವ ಅಗತ್ಯವಿಲ್ಲ: ಶಿವಕುಮಾರ್

ನೀವು ರಾಜೀನಾಮೆ ಕೊಟ್ರೆ, ನೀವು ಹೇಳಿದವರನ್ನೇ ಸಿಎಂ ಮಾಡ್ತಾರೆ. ನಾವ್ಯಾರೂ ಸಿಎಂ ಸೀಟಿಗೆ ಟವೆಲ್, ಕರ್ಚೀಫ್ ಹಾಕಿಲ್ಲ. ವೇಸ್ಟ್ ಪೇಪರ್ ಸಹ ಹಾಕಿಲ್ಲ. ಅದನ್ನೆಲ್ಲ ಹಾಕಿರೋದು ನಿಮ್ಮ ಪಕ್ಷದವರೇ. ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಿ ಎಂದು ಸಿ.ಟಿ.ರವಿ ಸಲಹೆ ನೀಡಿದರು.

Share This Article