GAIL ಸಂಸ್ಥೆಯ ವಿರುದ್ಧ ಬೆಂಗಳೂರಿನ ಸದಾನಂದ ನಗರ ನಿವಾಸಿಗಳ ಪ್ರತಿಭಟನೆ‌

Public TV
1 Min Read

ಬೆಂಗಳೂರು: NGEF ಲೇಔಟ್ ಸದಾನಂದ ನಗರದ ಉದ್ಯಾನವನದಲ್ಲಿ GAIL ಸಂಸ್ಥೆ ಸ್ಥಾವರ ನಿರ್ಮಾಣಕ್ಕೆ ಮುಂದಾಗಿದ್ದು, ಜನಾಕ್ರೋಶ ಎದುರಾಗಿದೆ‌.

ಇಲ್ಲಿನ ನಿವಾಸಿಗಳಿಗೆ ಮಕ್ಕಳಿಗೆ ವೃದ್ಧರಿಗೆ ಯುವಕರಿಗೆ ವಾಕಿಂಗ್ ಮಾಡಲು, ಆಟವಾಡಲು ಇರೋದು ಇದೊಂದೆ ಪಾರ್ಕ್ ಆಗಿದೆ. ಹೀಗಾಗಿ ಬೇರೆ ಸ್ಥಳದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಸ್ಥಾವರವನ್ನು ಈ ಪಾರ್ಕ್ ಜಾಗಕ್ಕೆ ಶಿಫ್ಟ್ ಮಾಡಲು ಹೊರಟಿರುವುದರ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ: ಬೊಮ್ಮಾಯಿ

ಈ ಸ್ಥಾವರ ನಿರ್ಮಾಣಕ್ಕೆ ಪಾರ್ಕ್‌ನಲ್ಲಿರುವ ಸುಮಾರು 30-50 ಮರಗಳ ತೆರವು ಮಾಡಬೇಕಾಗಿದೆ. ಹಸಿರನ್ನು ಅಪೋಷನ ತೆಗೆದುಕೊಂಡು ಈ ಸ್ಥಾವರ ನಿರ್ಮಾಣ ಬೇಕಾಗಿಲ್ಲ‌ ಉದ್ಯಾನವನ ಹೊರತುಪಡಿಸಿ ಬೇರೆ ಜಾಗದಲ್ಲಿ ನಿರ್ಮಾಣ ಮಾಡಲಿ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. NGEF ಲೇಔಟ್ ಸದಾನಂದ ನಗರದ ಉದ್ಯಾನವನ ಬಿಡಿಎಗೆ ಸೇರಿದ್ದು, ಸದ್ಯ ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *