ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು

Public TV
1 Min Read

ನವದೆಹಲಿ: ಮಧ್ಯಪ್ರದೇಶದ ಭೋಪಾಲ್ ನಿವಾಸಿಗಳು ಗುರುವಾರ ಮಧ್ಯರಾತ್ರಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ 24 ದಿನದ ಮಗುವಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ನಾಗ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಶಿಶುವೊಂದು ವೈದ್ಯಕೀಯ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿತ್ತು. ಹಾಗಾಗಿ ರೈಲಿನಲ್ಲಿ ಆಮ್ಲಜನಕದ ಕೊರತೆಯಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಶಿಶುವಿನ ಪೋಷಕರು ಆಮ್ಲಜನಕದ ಸಿಲಿಂಡರ್‌ಗಾಗಿ ಮಧ್ಯರಾತ್ರಿಯ ಸುಮಾರಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಕಳುಹಿಸಿದ್ದಾರೆ. ಅದು ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು. ಈ ವೇಳೆ ಬೆಳಗಿನ ಜಾವ 2 ಗಂಟೆಯ ಹೊತ್ತಿಗೆ ರೈಲು ಭೋಪಾಲ್ ನಿಲ್ದಾಣವನ್ನು ತಲುಪುವ ಹೊತ್ತಿಗೆ ವೈದ್ಯರು, ಎನ್‍ಜಿಒಗಳು, ರೈಲ್ವೆ ಅಧಿಕಾರಿಗಳು ಮತ್ತು ಭೋಪಾಲ್ ಸ್ಥಳೀಯರು ಸಿಲಿಂಡರ್‌ಗಳನ್ನು ತೆಗೆದುಕೊಂಡು ಬಂದು ಕಾಯುತ್ತಿದ್ದರು. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ, ಭಗವಂತ್ ಮಾನ್, ಕೇಜ್ರಿವಾಲ್

ಮಗುವಿನ ತಂದೆ ಪ್ರವೀಣ್ ಸಹಾರೆ ಅವರು ಭೋಪಾಲ್‍ನ ಕೆಲವು ಸಾಮಾಜಿಕ ಸೇವಾ ಸಂಸ್ಥೆಗಳಿಗೆ ಅವರ ಮಗುವಿನ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ. ಆದರೆ ನಾಗ್ಪುರದ ಅವರ ಸ್ನೇಹಿತ ಖುಶ್ರು ಯೋಚಾ ಅವರು ಸಾಮಾಜಿಕ ಜಾಲತಾಣದಲ್ಲಿ 15 ಕೆ.ಜಿ ಆಮ್ಲಜನಕ ಅಗತ್ಯವಿದೆ ಎಂದು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಅವರು ಹಲವಾರು ರೈಲ್ವೆ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ.

ಅವರ ಪೋಸ್ಟ್ ನಂತರ, ಖುಶ್ರು ಯೋಚಾ ಅವರನ್ನು ಭೋಪಾಲ್‍ನ ಮಾಜಿ ವಿಭಾಗೀಯ ರೈಲ್ವೇ ಮ್ಯಾನೇಜರ್ ಉದಯ್ ಬೋವಾರ್ಂಕರ್ ಅವರು ಸಂಪರ್ಕಿಸಿದರು. ಅವರು 30 ನಿಮಿಷಗಳಲ್ಲಿ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಸಿಲಿಂಡರ್ ನೀಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಚಾರ್ ಧಾಮ್ ಯಾತ್ರೆಗೆ ಮೇ ತಿಂಗಳಲ್ಲಿ ವಿಶೇಷ ಆಫರ್

ಮಧ್ಯಾಹ್ನ 2:43ಕ್ಕೆ ಭೋಪಾಲ್‍ನಲ್ಲಿ ಅವರಿಗೆ ಮೂರು ಸಿಲಿಂಡರ್‍ಗಳನ್ನು ವಿತರಿಸಲಾಯಿತು. ಅನೇಕ ಸಂಘಟನೆಗಳು ಸಿಲಿಂಡರ್‌ಗಳೊಂದಿಗೆ ನಿಲ್ದಾಣವನ್ನು ತಲುಪಿದವು. ಆದರೆ ಅವರು ಕೇವಲ ಮೂರು ಸಿಲಿಂಡರ್‌ಗಳನ್ನು ತೆಗೆದುಕೊಂಡರು ಎಂದು ಸಹಾರೆ ಹೇಳಿದರು. ವರದಿಗಳ ಪ್ರಕಾರ, ಮಗುವಿಗೆ ಈಗ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *