ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ರದ್ದು ಮಾಡಿ- ಸಿಎಂಗೆ ಕುರುಬೂರು ಶಾಂತಕುಮಾರ್ ಮನವಿ

Public TV
2 Min Read

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ (CM Siddaramaiah) ಮನವಿ ಮಾಡಿರುವುದಾಗಿ ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ತಿಳಿಸಿದ್ದಾರೆ.

ಸಿಎಂ ಅವರನ್ನು ಭೇಟಿಯಾಗಿ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 40 ಸಾವಿರ ಕೆರೆಗಳನ್ನು ಹೂಳೆತ್ತಿಸಿ ರೈತ ಜಮೀನಿಗೆ ನೀರು ಸರಬರಾಜು ಮಾಡಲು ಮನವಿ ಮಾಡಿದ್ದೇವೆ. ತೆಲಂಗಾಣದಲ್ಲಿ ಈ ಮಾದರಿ ಮಾಡಿದ್ದಾರೆ. ಇದನ್ನು ರಾಜ್ಯದಲ್ಲಿ ಜಾರಿ ಮಾಡಲು ಮನವಿ ಮಾಡಿದ್ದೇವೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇನ್ನೂ ಕಾಯ್ದೆ ರದ್ದು ಮಾಡಿಲ್ಲ. ಎಪಿಎಂಸಿ ಕಾಯ್ದೆ ರದ್ದು ಮಾಡಿದಂತೆ ಕೂಡಲೇ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ

ಕೇಂದ್ರದ ಕಾಯ್ದೆ ನೆಪದಲ್ಲಿ ರೈತರ ಜಮೀನುಗಳನ್ನ ಬ್ಯಾಂಕ್ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರದ ಕಾನೂನುನನ್ನು ರಾಜ್ಯ ಸರ್ಕಾರ ವಿರೋಧ ಮಾಡಬೇಕು. ಎನ್‌ಡಿಆರ್‌ಎಫ್ ಮಾನದಂಡ ಪರಿಷ್ಕರಣೆ ಮಾಡಬೇಕು. ಬರ ಪರಿಹಾರದ ಪರಿಹಾರ ಮೊತ್ತ ಜಾಸ್ತಿ ಮಾಡಬೇಕು. ಕಳಸಾ-ಬಂಡೂರಿ ಯೋಜನೆ ವಿಚಾರ ವನ್ಯಜೀವಿ ಮಂಡಳಿ ವಿರೋಧ ಮಾಡಿದೆ. ಇದಕ್ಕೆ ಯಾರು ವಿರೋಧ ಮಾಡದೇ ಯೋಜನೆ ಜಾರಿ ಮಾಡಲು ಸಹಕಾರ ನೀಡಬೇಕು. ಈ ಬಗ್ಗೆ ಕೇಂದ್ರಕ್ಕೆ ಒತ್ತಾಯ ಮಾಡಬೇಕು. ಅಗತ್ಯ ಬಿದ್ದರೆ ನಿಯೋಗದಲ್ಲಿ ನಾವು ಭಾಗಿಯಾಗುತ್ತೇವೆ ಎಂದು ತಿಳಿಸಿದ್ದೇವೆ. ಕಳಸಾ-ಬಂಡೂರಿ ವಿಚಾರವಾಗಿ ಕೇಂದ್ರದ ಬಳಿಕ ನಿಯೋಗ ಹೋಗುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯ ರೈಲ್ವೆ ಮೇಲೆ ಆಗಂತುಕರ ಕಣ್ಣು – ಆಗಸ್ಟ್ ತಿಂಗಳಲ್ಲೇ 18 ಬಾರಿ ರೈಲು ಹಳಿ ತಪ್ಪಿಸಲು ಯತ್ನ

ರಾಜ್ಯದಲ್ಲಿ 40 ಸಾವಿರ ಪಂಪ್ ಸೆಟ್‌ಗಳು ಇವೆ. ಈ ಪಂಪ್ ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಸರ್ಕಾರ ಹೇಳುತ್ತಿದೆ. ಆಧಾರ್ ಕಾರ್ಡ್ ಕಡ್ಡಾಯಕ್ಕೆ ನಮ್ಮ ವಿರೋಧ ಇದೆ. ಯಾವುದೇ ಕಾರಣಕ್ಕೂ ಪಂಪ್ ಸೆಟ್‌ಗೆ ಆಧಾರ್ ಕಾರ್ಡ್ ಕಡ್ಡಾಯಬೇಡ ಎಂದು ಹೇಳಿದ್ದೇವೆ. ಸಿಎಂ ಇದಕ್ಕೆ ಒಪ್ಪಿದ್ದಾರೆ. ಕಬ್ಬಿನ ಕಾರ್ಖಾನೆಗೆ ಬಾಕಿ ಇರೋ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರಿಕೆಗೆ ಒಂದು ತಿಂಗಳು ಗಡುವು ನೀಡಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದೇ ಹೋದರೆ ವಿಧಾನಸೌಧದಕ್ಕೆ ಮುತ್ತಿಗೆ ಹಾಕೋದಾಗಿ ತಿಳಿಸಿದ್ದೇವೆ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ – ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ ವರ್ಗಾಯಿಸಲು ಚಿಂತನೆ: ಬಿ.ದಯಾನಂದ್‌

Share This Article