ದರ್ಶನ್‌ಗೂ ಆರೋಪಿಗೂ ಸಂಬಂಧವೇ ಇಲ್ಲ – ಸ್ನೇಹಿತನ ಮಾತು ಕೇಳಿ ಶೆಡ್‌ನಲ್ಲಿ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಿಕ್ಕಿಬಿದ್ದ

By
1 Min Read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy Murder Case) 9ನೇ ಆರೋಪಿ ರಾಜು (Raju) ಅಲಿಯಾಸ್‌ ಧನರಾಜುನನ್ನು ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ದರ್ಶ‌ನ್‌ಗೂ (Darshan) ಧನರಾಜುಗೆ ನೇರ ನೇರ ಸಂಪರ್ಕ ಇಲ್ಲ. ಆದರೆ ಸ್ನೇಹಿತನ ಮಾತು ಕೇಳಿ ರಾಜು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ದರ್ಶನ್‌ (Darshan) ಮೇಲಿನ ಅಂಧಾಭಿಮಾನದಿಂದ ಎ5 ಆರೋಪಿ ನಂದೀಶ್‌ ಸ್ನೇಹಿತನನ್ನ ಭಾಗಿಯಾಗಿಸಿದ್ದಾನೆ. ಜೊತೆಗೆ ಕೆಲಸ ಮಾಡುತ್ತಿದ್ದವನ ಮಾತು ಕೇಳಿ ಎಲೆಕ್ಟ್ರಿಕ್ ಡಿವೈಸ್ ತಂದು ಸಹಾಯ ಮಾಡಿದ್ದಕ್ಕೆ ಈಗ ರಾಜು ಈ ಪ್ರಕರಣದ ಆರೋಪಿ ಪಟ್ಟಿ ಸೇರಿದ್ದಾನೆ. ಇದನ್ನೂ ಓದಿ: ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

ನಂದೀಶ್‌ ಜೊತೆ ಬೆಂಗಳೂರಲ್ಲಿ ರಾಜು ಕೇಬಲ್ ಕೆಲಸ ಮಾಡಿಕೊಂಡಿದ್ದ. ಕೇಬಲ್ ಕೆಲಸ ಮಾಡುತ್ತಿದ್ದರಿಂದ ಎಲೆಕ್ಟ್ರಿಕಲ್ ಮೆಗ್ಗಾರ್ ಬಗ್ಗೆ ಆರೋಪಿಗಳು ತಿಳಿದುಕೊಂಡಿದ್ದರು.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ನಂದೀಶ್‌ ಮತ್ತು ಇತರ ಆರೋಪಿಗಳು ಕರೆಂಟ್‌ ಶಾಕ್‌ ನೀಡುವ ಪ್ಲ್ಯಾನ್‌ ಮಾಡಿದ್ದರು. ಜೂನ್‌ 8 ರಂದು ಮೆಗ್ಗಾರ್ ಸಾಧನದ ಜೊತೆ ರಾಜುನನ್ನು ಪಟ್ಟಣಗೆರೆ ಶೆಡ್‌ಗೆ ನಂದೀಶ್ ಕರೆಸಿಕೊಂಡಿದ್ದ. ಪ್ಲ್ಯಾನ್‌ನಂತೆ ರಾಜುವಿನಿಂದ ಎಲೆಕ್ಟ್ರಿಕಲ್ ಮೆಗ್ಗಾರ್‌ ಯಂತ್ರವನ್ನು ನಂದೀಶ್ ತರಿಸಿಕೊಂಡಿದ್ದರು. ಆ ಮೆಗ್ಗಾರ್‌ ಯಂತ್ರವನ್ನು ಬಳಸಿ ರೇಣುಕಾಸ್ವಾಮಿಗೆ ಆರೋಪಿಗಳು ಕರೆಂಟ್ ಶಾಕ್ ನೀಡಿದ್ದರು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜು ತಲೆ ಮರೆಸಿಕೊಂಡಿದ್ದ. ಈ ಪ್ರಕರಣದಲ್ಲಿ ರಾಜು ಪಾತ್ರ ಇರುವುದನ್ನು ಖಚಿತಪಡಿಸಿದ ಪೊಲೀಸರು ಎಫ್‌ಐಆರ್‌ನಲ್ಲಿ 9ನೇ ಆರೋಪಿಯನ್ನಾಗಿ ಹೆಸರಿಸಿದ್ದರು. ನಾಪತ್ತೆಯಾಗಿದ್ದ ಸ್ನೇಹಿತ ರಾಜುವನ್ನು ಬೆಂಗಳೂರಿನ ಸ್ನೇಹಿತನ ಮನೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ಯ ರಾಜುವನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಾಜು ಜೊತೆ ಎಲೆಕ್ಟ್ರಿಕಲ್ ಮೆಗ್ಗರ್ ಯಂತ್ರ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ರಾಜು ತನ್ನ ಪಾತ್ರವನ್ನು ವಿವರಿಸಿದ್ದಾನೆ.

Share This Article