ರೇಣುಕಾಸ್ವಾಮಿ ಪ್ರಾಣಭಿಕ್ಷೆಗೆ ಅಂಗಲಾಚುತ್ತಿರೋದು ‘ಎಐ’ ಫೋಟೊ? – ಆರೋಪಿ ಮೊಬೈಲ್ ಮತ್ತೆ FSL ಪರೀಕ್ಷೆಗೆ

Public TV
1 Min Read

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊನೆ ಕ್ಷಣಗಳ ಫೋಟೊಗಳು ‘ಎಐ’ನದ್ದು ಎನ್ನುವ ಆರೋಪ ಕೇಳಿಬಂದಿದೆ.

ನಟ ದರ್ಶನ್ (Darshan) ಗ್ಯಾಂಗ್‌ನಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ರೇಣುಕಾಸ್ವಾಮಿ ಪ್ರಾಣಭಿಕ್ಷೆ ನೀಡುವಂತೆ ಕಣ್ಣೀರಿಟ್ಟು ಅಂಗಲಾಚಿದ್ದ ಸಂದರ್ಭದಲ್ಲಿ ತೆಗೆದಿತ್ತು ಎನ್ನಲಾದ ಫೋಟೊ ಎಲ್ಲೆಡೆ ವೈರಲ್ ಆಗಿತ್ತು. ಆದರೆ ಇದು ಎಐ ಫೋಟೊ ಎಂದು ಆರೋಪಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಜೈಲಲ್ಲಿ ಕಿರಿಕಿರಿ ಮಾಡಿದ್ರೆ ಬೇಲ್‌ಗೆ ಕಷ್ಟವಾಗುತ್ತೆ – ವಕೀಲರ ಎಚ್ಚರಿಕೆ ಬಳಿಕ ಎಚ್ಚೆತ್ತುಕೊಂಡ ದರ್ಶನ್!

ಪ್ರಾಣಭಿಕ್ಷೆಯ ಫೋಟೊ ‘ಎಐ’ದು ಎನ್ನುವ ಆರೋಪ ಹಿನ್ನೆಲೆಯಲ್ಲಿ ಆರೋಪಿ ವಿನಯ್ ಮೊಬೈಲ್‌ನ ಮತ್ತೆ ಎಫ್‌ಎಸ್‌ಎಲ್ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿನಯ್‌ನ ಐಫೋನ್ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಫೋಟೊಗಳು ಪತ್ತೆಯಾಗಿದ್ದವು.

ವಿನಯ್ ಮೊಬೈಲ್ ಎಕ್ಸ್ಟ್ರಾಕ್ಟ್ ವೇಳೆ ರೇಣುಕಾಸ್ವಾಮಿಯ ರಕ್ತಸಿಕ್ತ ಫೋಟೊಗಳು ಪತ್ತೆಯಾಗಿದ್ದವು. ಇದೀಗ ಸಿಕ್ಕಿರುವ ಫೋಟೊಗಳನ್ನ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲು ಪೊಲೀಸರು ನಿರ್ಧಾರಿಸಿದ್ದಾರೆ. ಇದನ್ನೂ ಓದಿ: ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ – ಪ್ರತಿಭಟನೆಗೆ ವಿಷ್ಣು ಫ್ಯಾನ್ಸ್‌ ನಿರ್ಧಾರ

ವಿನಯ್ ಮೊಬೈಲ್ ಮತ್ತೆ ಎಫ್‌ಎಸ್‌ಎಲ್‌ಗೆ ಕಳಿಸಲು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ವಿನಯ್ ಮೊಬೈಲ್‌ನಲ್ಲಿ ಸಿಕ್ಕಿದ್ದ ಫೋಟೊಗಳ ಮರುಪರೀಕ್ಷೆಗೆ ತಯಾರಿ ನಡೆದಿದೆ. ಆ ಮೂಲಕ ಫೋಟೊಗಳ ಅಸಲಿಯತ್ತಿನ ಪರೀಕ್ಷೆ ನಡೆಸಿ ಮತ್ತೊಮ್ಮೆ ವರದಿ ನೀಡಲು ನಿರ್ಧಾರಿಸಲಾಗಿದೆ. ಐಫೋನ್‌ನ ರಿಪೋರ್ಟ್ ಪಡೆಯಲು ಕೋರ್ಟ್ನಿಂದ ಪೊಲೀಸರು ಅನುಮತಿ ಪಡೆದಿದ್ದಾರೆ.

Share This Article