ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆಗೈದಿದ್ದ ‘ಡಿ ಬಾಸ್’ ಗ್ಯಾಂಗ್!

Public TV
2 Min Read

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಮತ್ತು ಗ್ಯಾಂಗ್ ಬರ್ಬರವಾಗಿ ಕೊಲೆ ಮಾಡಿದೆ. ರೇಣುಕಾಸ್ವಾಮಿಯ (Renukaswamy) ಮರ್ಮಾಂಗಕ್ಕೆ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆಗೈದಿರುವ ‘ಡಿ ಬಾಸ್’ ಗ್ಯಾಂಗ್ ಸದ್ಯ ಪೊಲಿಸ್ ಕಸ್ಟಡಿಯಲ್ಲಿದೆ.

ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಅಂತೆಯೇ ಮಂಗಳವಾರ ರಾತ್ರಿ ಚಿತ್ರದುರ್ಗದಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಸಂಸ್ಕಾರವೂ ನಡೆದಿದೆ. ಆದರೆ ಈ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶಾಕಿಂಗ್ ವಿಚಾರಗಳು ಬಯಲಾಗಿದೆ.

ವಿಕ್ಟೋರಿಯಾ ಫಾರೆನ್ಸಿಕ್ ತಜ್ಞರ ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿ ಮಮಾರ್ಂಗದ ಮೇಲೆ ಹಲ್ಲೆ ಮಾಡಿರೋದು ದೃಢವಾಗಿದೆ. ಹಾಗಿದ್ರೆ ದೇಹದ ಯಾವ ಭಾಗದಲ್ಲಿ ರಕ್ತ ಬಂದಿತ್ತು? ಎಲ್ಲೆಲ್ಲಿ ಗಾಯ ಆಗಿತ್ತು?, ಸಾವಿಗೆ ಕಾರಣ ಏನು? ಎಂಬುದರ ಕಂಪ್ಲೀಟ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ದೇಹದ ಯಾವ ಭಾಗದಲ್ಲಿ ರಕ್ತ ಸೋರಿಕೆಯಾಗಿದೆ?
1. ಮಮಾರ್ಂಗದ ಭಾಗದಲ್ಲಿ ರಕ್ತ ಸೋರಿಕೆ: ಮಮಾರ್ಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಮಮಾರ್ಂಗದ ಭಾಗದಲ್ಲಿ ರಕ್ತ ಚೆಲ್ಲಿದೆ.
2. ಹೊಟ್ಟೆ ಭಾಗದಲ್ಲಿ ರಕ್ತ ಸೋರಿಕೆ: ಮರದ ಪೀಸ್ ನಿಂದ ಹಲ್ಲೆ ಮಾಡಲಾಗಿದೆ. ಹೊಟ್ಟೆಯ ಭಾಗದಲ್ಲಿ ರಕ್ತ ಚಿಮ್ಮಿದೆ
3. ತಲೆಗೆ ಹೊಡೆದಿದ್ದಾರೆ ಆದರೆ ರಕ್ತ ಸೋರಿಕೆಯಾಗಿಲ್ಲ
4. ಕೈ ಮತ್ತು ಕಾಲುಗಳಲ್ಲಿ ರಕ್ತ ಬಂದಿದೆ
5. ಬೆನ್ನಿನಲ್ಲಿ ರಕ್ತ ಬಂದಿದೆ
6. ಎದೆ ಭಾಗದಲ್ಲೂ ರಕ್ತ ಬಂದಿದೆ

ರೇಣುಕಾಸ್ವಾಮಿ ಸಾವಿಗೆ ಕಾರಣ ಏನು?
* ದೇಹಕ್ಕೆ ಆಘಾತ ಆಗಿ ಸಾವಾಗಿದೆ
* ರಕ್ತ ಹೆಪ್ಪುಗಟ್ಟಿ ಸಾವಾಗಿದೆ

ಹಲ್ಲೆಗೆ ಯಾವೆಲ್ಲ ಅಸ್ತ್ರಗಳನ್ನು ಬಳಸಿದ್ದಾರೆ?
* ಮರದ ಪೀಸ್
* ಬೆಲ್ಟ್
* ದೇಹದಲ್ಲಿ 15 ಕಡೆ ಗಾಯಗಳಾಗಿವೆ

ಇನ್ನು ಮುಖ ಮತ್ತು ದವಡೆಯನ್ನ ನಾಯಿಗಳು ಕಿತ್ತು ತಿಂದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಇನ್ನು ವಿಷ ತೆಗೆದುಕೊಂಡಿದ್ದಾರಾ ಅಂತಾ ಪತ್ತೆ ಹಚ್ಚಲು ದ್ರಾವಣಾಂಶಗಳನ್ನ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 30 ಲಕ್ಷಕ್ಕೆ ಡೀಲ್‌ – ಕೊಲೆ ಮಾಡಿ ದರ್ಶನ್ ಟೀಂ ಸಿಕ್ಕಿಬಿದ್ದಿದ್ದೇ ರೋಚಕ!

ಒಟ್ಟಿನಲ್ಲಿ ಒಂದು ಮೆಸೇಜ್‍ಗೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಕೊಡಬಾರದ ಚಿಂತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಲ್ಲದೇ ಡಿ ಬಾಸ್ ಗ್ಯಾಂಗ್ ಮೃತದೇಹವನ್ನು ಮೋರಿಗೆ ಎಸೆದಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಎಲ್ಲಾ ಆರೋಪಿಗಳನ್ನು ಇಂದು ಬೆಳಗ್ಗೆ 9 ಗಂಟೆಯ ಬಳಿಕ ಸ್ಥಳ ಮಹಜರಿನ ಜೊತೆಗೆ ವಿಚಾರಣೆಯನ್ನು ಕೂಡ ಪೊಲೀಸರು ನಡೆಸಲಿದ್ದಾರೆ.

Share This Article