ದರ್ಶನ್ ಕುಳಿತರೆ ಜುಟ್ಟು, ನಿಂತರೆ ಕಾಲು- ಗುಮ್ಮಿದ ಉಮಾಪತಿ

Public TV
1 Min Read

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ (Renukaswamy Murder Case) ವಿಚಾರವಾಗಿ ಖ್ಯಾತ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಬಗ್ಗೆ ನಿರ್ಮಾಪಕ ಉಮಾಪತಿ ಖಂಡಿಸಿದ್ದಾರೆ. ದರ್ಶನ್ ಕುಂತ್ರೆ ಜುಟ್ಟು, ನಿಂತ್ರೆ ಕಾಲು ಎಂದು ಹೇಳುವ ಮೂಲಕ ದರ್ಶನ್‌ಗೆ ಉಮಾಪತಿ ಟಾಂಗ್ ಕೊಟ್ಟಿದ್ದಾರೆ.

ಬರ್ಬರವಾಗಿ ಕೊಲೆ ಮಾಡಿರೋದು ನಿಜವಾಗಿವೇ ಆಗಿದ್ದಲ್ಲಿ ಖಂಡಿತವಾಗಿಯೂ ಅವರನ್ನು ಗಲ್ಲಿಗೆ ಏರಿಸಬೇಕು ಎಂದು ಉಮಾಪತಿ (Umapathy Srinivas) ಗುಡುಗಿದ್ದಾರೆ. ತಪ್ಪು ಎಲ್ಲರೂ ಮಾಡ್ತಾರೆ. ತೀರಾ ಹೀನಾಯ ಕೃತ್ಯ ಮಾಡಿದ್ದಾರೆ ಅಂದರೆ ಅವರ ಉದ್ದೇಶ ಏನು ಎಂಬುದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಯಾರಿಗೋ ತೊಂದರೆ ಕೊಟ್ಟು, ಅವರನ್ನು ಹೀಯಾಳಿಸಿ ಮಣ್ಣಿಗೆ ಹಾಕಿ ನಾವು ನೆಮ್ಮದಿಯಾಗಿ ಬದುಕುತ್ತೇವೆ ಎಂಬುದೆಲ್ಲಾ ಸುಳ್ಳು ಎಂದಿದ್ದಾರೆ.

ಯಾವಾಗಲೂ ಆ ಪಾಪ ಪ್ರಜ್ಞೆ ಕಾಡುತ್ತಲೇ ಇರುತ್ತದೆ. ಕೊನೆಗೆ ರೇಣುಕಾಸ್ವಾಮಿಗೆ ಏನು ಆಗಿದೆಯೋ ಅದೇ ಗತಿ ಅವರಿಗೂ ಬರುತ್ತದೆ. ಎಲ್ಲರಿಗೂ ಬದುಕು ಹಕ್ಕಿದೆ. ಆ ಹಕ್ಕನ್ನು ಯಾರು ಕಿತ್ತುಕೊಳ್ಳಲಾಗದು ಎಂದು ದರ್ಶನ್‌ಗೆ ಉಮಾಪತಿ ಗುಮ್ಮಿದ್ದಾರೆ. ಇದನ್ನೂ ಓದಿ:ಲ್ಯಾಂಬೋರ್ಗಿನಿ ತಗೋಳೋಕೆ ದರ್ಶನ್‌ಗೆ ಅಡ್ವಾನ್ಸ್ ಕೊಟ್ಟಿದ್ದೇ ನಾನು: ಉಮಾಪತಿ

ಈ ಪ್ರಕರಣದಲ್ಲಿ ಲಿಂಕ್ ಇರೋದು ಕೆಲವರಿಗೆ ಮಾತ್ರ. ಇನ್ನೂ ಉಳಿದವರು ಅಮಾಯಕರು ದರ್ಶನ್ ಮೇಲಿನ ಪ್ರೀತಿಗೆ ಬಂದಿದ್ದಾರೆ ಅಷ್ಟೇ. ಇವಾಗ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಯನ್ನು ಪ್ರೀತಿಸಿ ಬೇಡ ಹೇಳೋದಿಲ್ಲ. ಆದರೆ ನಿಮ್ಮ ಕುಟುಂಬನ ಬೀದಿಗೆ ಬಿಟ್ಟು ಪೋಷಕರನ್ನು ಬಲಿ ಕೊಟ್ಟು ಪ್ರೀತಿಸಲು ಹೋಗಬೇಡಿ ಎಂದು ಅಭಿಮಾನಿಗಳಿಗೆ ಉಮಾಪತಿ ಕಿವಿ ಹಿಂಡಿದ್ದಾರೆ.


ಮೆಗ್ಗಾರ್ ಎಲ್ಲಾ ತರಿಸುವ ಅವಶ್ಯಕತೆ ಇತ್ತಾ? ರೇಣುಕಾಸ್ವಾಮಿ ಟೆರೆರಿಸ್ಟ್ ಆಗಿದ್ರಾ ಎಂದು ಉಮಾಪತಿ ಪ್ರಶ್ನಿಸಿದ್ದಾರೆ. ದರ್ಶನ್ ಕುಂತ್ರೆ ಜುಟ್ಟು, ನಿಂತರೆ ಕಾಲು ಇದು ನನ್ನ ಅನುಭವ ಎಂದಿದ್ದಾರೆ. ಇನ್ನಾದರೂ ಅವರು ಸುಧಾರಿಸಿಕೊಳ್ಳಬೇಕು. ಅದೆಷ್ಟೋ ದರ್ಶನ್ ವಿರುದ್ಧ ಧರಣಿ ಮಾಡುತ್ತಿದ್ದಾರೆ ಎಂದು ಖಡಕ್ ಆಗಿ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

Share This Article