ಜಾಮೀನಿಗೆ ಮೇಲ್ಮನವಿ ಬಳಿಕ ದರ್ಶನ್‌ಗೆ ಬೆಂಗಳೂರು ಪೊಲೀಸರಿಂದ ಮತ್ತೊಂದು ಶಾಕ್‌!

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ (Renukaswamy Murder Case) ಎ2 ಆರೋಪಿಯಾಗಿರುವ ನಟ ದರ್ಶನ್‌ಗೆ (Darshan) ಕೋರ್ಟ್‌ನಿಂದ ಜಾಮೀನು ಸಿಕ್ಕರೂ ಒಂದೊಂದೇ ಸಂಕಷ್ಟಗಳು ಎದುರಾಗುತ್ತಿವೆ. ಈಗಾಗಲೇ ಜಾಮೀನು ರದ್ದುಗೊಳಿಸುವಂತೆ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ನಡುವೆ ದರ್ಶನ್‌ ಬಳಿಯಿರುವ ಗನ್‌ ಲೈಸೆನ್ಸ್‌ ರದ್ದು ಮಾಡಲು ಪೊಲೀಸ್‌ ಇಲಾಖೆ ಮುಂದಾಗಿದೆ.

ತಮ್ಮ ಬಳಿಯಿರುವ ಗನ್‌ ಲೈಸೆನ್ಸ್‌ (Gun license) ಬಗ್ಗೆ 1 ವಾರದಲ್ಲಿ ಸ್ಪಷ್ಟನೆ ನೀಡುವಂತೆ ಡಿಸಿಪಿ ಪದ್ಮಿನಿ ಸಾಹು ನೋಟಿಸ್‌ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್- ಸೀಜ್ ಮಾಡಿದ್ದ 40.40 ಲಕ್ಷ ಹಣ ವಾಪಸ್ ಕೊಡಿಸುವಂತೆ ಕೋರ್ಟ್‌ಗೆ ದರ್ಶನ್ ಅರ್ಜಿ

ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್‌ ಇರೋದ್ರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್‌ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ದರ್ಶನ್‌, ದೆಹಲಿಗೆ ಪವಿತ್ರಾ – ಕೋರ್ಟ್‌ನಿಂದ ಅನುಮತಿ

40.40 ಲಕ್ಷ ಹಣ ವಾಪಸ್‌ಗೆ ಮನವಿ:
ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ಸೀಜ್ ಮಾಡಿದ್ದ 40.40 ಲಕ್ಷ ರೂ. ಹಣವನ್ನು ವಾಪಸ್ ಕೊಡಿಸುವಂತೆ ಕೋರ್ಟ್‌ಗೆ ನಟ ದರ್ಶನ್‌ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ 57ನೇ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಹಾಗೂ ಪ್ರದೂಷ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ನಿವಾಸ, ಪ್ರದೂಷ್ ನಿವಾಸ ಹಾಗೂ ವಿಜಯಲಕ್ಷ್ಮಿ ಅವರಿಂದ ಹಣ ವಶಕ್ಕೆ ಪಡೆಯಲಾಗಿತ್ತು. ರೇಣುಕಾಸ್ವಾಮಿ ಕೊಲೆ ಕೇಸಿನ ಸಾಕ್ಷ್ಯ ನಾಶಕ್ಕಾಗಿ ಹಣ ಸಂಗ್ರಹ ಮಾಡಿರುವ ಆರೋಪ ಹೊರಿಸಲಾಗಿತ್ತು.

Share This Article