ರೇಣುಕಾಸ್ವಾಮಿ ತಲೆ ಓಪನ್ – ‘ಡಿ’‌ ಗ್ಯಾಂಗ್‌ ಭೀಕರ ಕ್ರೌರ್ಯ ಫೋಟೊಗಳಿಂದ ಬಹಿರಂಗ

By
1 Min Read

ಬೆಂಗಳೂರು: ನಟ ದರ್ಶನ್‌ ಮತ್ತು ಗ್ಯಾಂಗ್‌ನಿಂದಾದ ರೇಣುಕಾಸ್ವಾಮಿಯ (Renukaswamy Murder Case) ಭೀಕರ ಕೊಲೆಯ ಒಂದೊಂದೇ ಫೋಟೊಗಳು ರಿವೀಲ್‌ ಆಗುತ್ತಿದೆ. ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದನ್ನು ಫೋಟೊಗಳು ಸ್ಪಷ್ಟಪಡಿಸಿದಂತಿವೆ.

ರೇಣುಕಾಸ್ವಾಮಿ ತಲೆ ಮೂರ್ನಾಲ್ಕು ಇಂಚು ಓಪನ್ ಆಗಿದೆ. ಮರದ ರಿಪೀಸ್‌ಪಟ್ಟಿಯಿಂದ ಹಲ್ಲೆ ಮಾಡಿ ಲಾರಿಗೆ ಗುದ್ದಿಸಿ ಆರೋಪಿಗಳು ಚಿತ್ರಹಿಂಸೆ ಕೊಟ್ಟಿರುವುದು ಫೋಟೊಗಳಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದರ್ಶನ್ ಮದುವೆ ಆಗ್ತೀನಿ.. ಅವರ ಹೆಂಡತಿ ಆಗೋಕೆ ರೆಡಿ: ಬಳ್ಳಾರಿ ಜೈಲ ಬಳಿ ಮಹಿಳೆ ಹೈಡ್ರಾಮಾ

ದರ್ಶನ್ ಗ್ಯಾಂಗ್‌ನ ಕ್ರೌರ್ಯ ಹೇಗಿತ್ತು ಸಾಕ್ಷ್ಯ ಸಿಕ್ಕಂತಾಗಿದೆ. ಮೊದಲಿಗೆ ಲಾಠಿ, ಮರದ ಪೀಸ್‌ನಿಂದ ಹಲ್ಲೆ ಮಾಡಿದ್ದಾರೆ. ಆಮೇಲೆ ನಿಂತಿದ್ದ ಲಾರಿಗೆ ಪದೇ ಪದೇ ತಲೆ ಗುದ್ದಿಸಿದ್ದಾರೆ. ತಲೆ ಗುದ್ದಿಸಿದ ಪರಿಣಾಮ, ತೀವ್ರ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ.

ರೇಣುಕಾಸ್ವಾಮಿಯ ದೇಹದ ಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಈ ಫೋಟೊಗಳ ಮೂಲಕ ಕೊಲೆಯ ಭೀಕರತೆಯನ್ನು ನ್ಯಾಯಾಲಯಕ್ಕೆ ಚಾರ್ಜ್‌ಶೋಟ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ. ಪಟ್ಟಣಗೆರೆ ಶೆಡ್‌ಗೆ ನಟ ದರ್ಶನ್‌ ಬಂದಿರುವ ಫೋಟೊ ಕೂಡ ಲಭ್ಯವಾಗಿದೆ. ಇದನ್ನೂ ಓದಿ: ಕೊಲೆಗೂ ಮುನ್ನ ದರ್ಶನ್‌ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಸ್ಥಳ ಮಹಜರು; ಫೋಟೊ ರಿವೀಲ್‌

ರೇಣುಕಾಸ್ವಾಮಿ ಕಿವಿ ಕೂಡ ಕಟ್‌ ಆಗಿದೆ. ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಬಳಸಿದ್ದ ಮೆಗ್ಗಾರ್‌, ಹಗ್ಗ, ಪೊಲೀಸ್‌ ಲಾಠಿ, ಹಲ್ಲೆಗೆ ಬಳಸಿದ್ದ ಮರದ ರಿಪೀಸ್‌ ವಸ್ತುಗಳ ಫೋಟೊಗಳು ಕೂಡ ರಿವೀಲ್‌ ಆಗಿದೆ.

Share This Article