ವಿಡಿಯೋ ಮಾಡೋದು ಬಿಟ್ಟು ಸರಿಯಾಗಿ ಕರ್ಕೊಂಡು ಹೋಗಿ – ಪೊಲೀಸರಿಗೆ ಪವಿತ್ರಾಗೌಡ ಅವಾಜ್‌

Public TV
2 Min Read

– ಎಲ್ಲಾ ನನ್ನ ಕರ್ಮ ಅಂತ ತಲೆ ಚಚ್ಚಿಕೊಂಡ ಪವಿತ್ರಾ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಅವರ ಜಾಮೀನು ರದ್ದಾದ ಬೆನ್ನಲ್ಲೇ ಪವಿತ್ರಾಗೌಡರನ್ನ ಅರೆಸ್ಟ್‌ ಮಾಡಲಾಗಿದೆ. ಬಂಧನದ ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತರಲಾಗಿದೆ.

ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್‌ (Karnataka Highcourt) ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆದ್ರೆ ಅರೆಸ್ಟ್‌ ಮಾಡಲು ಮನೆ ಬಳಿ ಬಂದ ಪೊಲೀಸರಿಗೆ ಪವಿತ್ರಾಗೌಡ ಆವಾಜ್‌ ಹಾಕಿರುವ ದೃಶ್ಯ ಕಂಡುಬಂದಿದೆ. ಪವಿತ್ರಾರನ್ನ ಕರೆದೊಯ್ಯುವ ವೇಳೆ ಲಾಯರ್‌ ಎಡವಿದ್ದಾರೆ. ಇದರಿಂದ ಸಿಟ್ಟಾದ ಪವಿತ್ರಾ ಯಾಕ್ರಿ ಹಿಂಗೆ ತಳ್ತೀರಾ.. ಮೊಬೈಲ್‌ ಬಿಡಿ ಮೊದಲು, ಸರಿಯಾಗಿ ಕರ್ಕೊಂಡ್‌ ಹೋಗಿ ಅಯ್ಯೊ.. ಅಂತಾ ತಲೆ ಚಚ್ಚಿಕೊಂಡಿದ್ದಾರೆ. ಜೊತೆಗೆ ಮಹಿಳಾ ಸಿಬ್ಬಂದಿ ಮೇಲೂ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾನೂನಿನ ಮುಂದೆ ಎಲ್ಲರೂ ಒಂದೇ – ದರ್ಶನ್ ಬೇಲ್ ರದ್ದು ಬಗ್ಗೆ ನಟಿ ರಮ್ಯಾ ಪೋಸ್ಟ್

ಮನೆಯ ಬಳಿ ಹೋದಾಗ ಆಗಿದ್ದೇನು?
ಸುಪ್ರೀಂ ಅರೆಸ್ಟ್‌ಗೆ ಸೂಚನೆ ಕೊಟ್ಟ ಬೆನ್ನಲ್ಲೇ ಪೊಲೀಸರು ಮೆಮೊ ಹಿಡಿದು ಮನೆ ಬಂದಿದ್ದರು. ಮನೆಯೊಳಗೆ ಪೊಲೀಸರು ಎಂಟ್ರಿ ಕೊಡ್ತಿದ್ದಂತೆ ಪವಿತ್ರಾಗೆ ದುಗುಡ ಹೆಚ್ಚಾಗಿತ್ತು, ಹಾಗಾಗಿ ಒಂದೇ ಒಂದೂ ಮಾತೂ ಆಡಲಿಲ್ಲ. ಈ ವೇಳೆ ಪವಿತ್ರಾ ಪರ ವಕೀಲರಾದ ಬಾಲನ್‌ ಮತ್ತು ನಾರಾಯಣಸ್ವಾಮಿ ಪೊಲೀಸರ ಜೊತೆ ಮಾತುಕತೆ ನಡೆಸಿದರು. ಸ್ಟೇಷನ್‌ಗೆ ಯಾಕೆ ಕೋರ್ಟ್‌ಗೆ ಹಾಜರುಪಡಿಸ್ತೀವಿ ನಡೆಯಿರಿ.. ಅಂದ್ರು. ಇದಕ್ಕೆ ಪೊಲೀಸರು ಕೋರ್ಟ್‌ನಿಂದ ಅರೆ ಸ್ಟ್‌ ಮಾಡಲೇಬೇಕೆಂದು ಸೂಚನೆ ಬಂದಿದೆ. ಅಂತ ಮೆಮೊ ಕೈಗಿತ್ತು ಪವಿತ್ರಾರರನ್ನ ಜೀಪ್‌ ಹತ್ತಿಸಿದ್ರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ1 ಆರೋಪಿ ಪವಿತ್ರಾ ಗೌಡ ಬಂಧನ

ಪವಿತ್ರಾ ಹೊರಡುವ ವೇಳೆ ಬೆನ್ನು ತಟ್ಟು ಧೈರ್ಯ ಹೇಳಿದ ವಕೀಲರು, ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಪರ ಹೋರಾಡ್ತೀವಿ ಅಂದ್ರು. ಇನ್ನೂ ಪವಿತ್ರಾಗೌಡರ ತಾಯಿಯಂತು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

Share This Article