ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ದರ್ಶನ್‌ಗೆ ಹೇಳಿ ತಪ್ಪು ಮಾಡಿದೆ: ಪವಿತ್ರಾ ಗೌಡ ಪಶ್ಚಾತ್ತಾಪ

Public TV
1 Min Read

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡಗೆ (Pavithra Gowda) ಇದೀಗ ಕೆಟ್ಟ ಮೇಲೆ ಬುದ್ಧಿ ಬಂದಿದೆ. ಕೈಗೆ ಕೋಳ ಬಿದ್ದ ಮೇಲೆ ಜ್ಞಾನೋದಯವಾಗಿದ್ದು, ಪೊಲೀಸರ ಮುಂದೆ ಪವಿತ್ರಾ ಗೌಡ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ಹೇಳಿ ತಪ್ಪು ಮಾಡಿದೆ ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ ಪವಿತ್ರಗೌಡ ಅಳಲು ತೋಡಿಕೊಂಡಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ಹೇಳಿ ತಪ್ಪು ಮಾಡಿದೆ. ದರ್ಶನ್‍ಗೆ (Challening Star Darshan) ಮೆಸೇಜ್ ಬಗ್ಗೆ ಹೇಳಿ ಘನಘೋರ ತಪ್ಪು ಮಾಡಿಕೊಂಡೆ. ಅಶ್ಲೀಲ ಮೆಸೇಜ್ ತೋರಿಸಿ ಘಟನೆ ಬಗ್ಗೆ ಹೇಳಿದ್ದೇ ಇಷ್ಟೆಲ್ಲಾ ಆಯ್ತು ಎಂದು ಪೊಲೀಸರ ಮುಂದೆ ಹೇಳಿದ್ದಾರೆ.

ಅಶ್ಲೀಲ ಮೆಸೇಜ್‍ಗಳನ್ನು ದರ್ಶನ್‍ಗೆ ತೋರಿಸಿ ಹೇಳಬಾರದಿತ್ತು. ಬದಲಾಗಿ ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಅಶ್ಲೀಲ ಮೆಸೇಜ್ ಬಗ್ಗೆ ದೂರು ಕೊಟ್ಟಿದ್ರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದೆ ತಪ್ಪಾಯ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆಗೈದಿದ್ದ ‘ಡಿ ಬಾಸ್’ ಗ್ಯಾಂಗ್!

ಹತ್ಯೆಯಾದ ರೇಣುಕಾಸ್ವಾಮಿ
ಹತ್ಯೆಯಾದ ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿ ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ನಟ ದರ್ಶನ್ ಬಂಧನದ ಬೆನ್ನಲ್ಲೇ ಪೊಲೀಸರು ಪವಿತ್ರಾ ಗೌಡಾರನ್ನು ಕೂಡ ಬಂಧಿಸಿದ್ದರು. ಇದಾದ ಬಳಿಕ ಎಲ್ಲಾ 13 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. 6 ದಿನ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿತ್ತು. ನಂತರ ಪವಿತ್ರಾ ಗೌಡರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಇಂದು ಬೆಳಗ್ಗೆ ಸಾಂತ್ವನ ಕೇಂದ್ರದಿಂದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ (Annapoorneshwari Police Station) ಕರೆತರಲಾಗಿದ್ದು,  ಸ್ಥಳ ಮಹಜರು ನಡೆಯಲಿದೆ.

Share This Article