ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ನಟ ದರ್ಶನ್‌ರನ್ನು (Darshan) ಭದ್ರತಾ ದೃಷ್ಟಿಯಿಂದ ಬಳ್ಳಾರಿ ಜೈಲಿಗೆ (Ballari Jail) ಶಿಫ್ಟ್ ಮಾಡುವಂತೆ ಹಾಗೂ ಹೆಚ್ಚುವರಿ ಹಾಸಿಗೆ, ದಿಂಬಿನ ಮನವಿ ಅರ್ಜಿ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಬುಧವಾರ ಸಂಜೆ 4 ಗಂಟೆಗೆ ಮುಂದೂಡಿಕೆ ಮಾಡಿದೆ.
ದರ್ಶನ್‌ರನ್ನು ಬಳ್ಳಾರಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ ಸರ್ಕಾರಿ ವಕೀಲರ ವಾದಕ್ಕೆ ದರ್ಶನ್ ಪರ ವಕೀಲ ಸಂದೀಪ್ ಚೌಟಾ ಆಕ್ಷೇಪಣೆ ಸಲ್ಲಿಸಿದರು. ಶೀಘ್ರದಲ್ಲೇ ಟ್ರಯಲ್ ಪ್ರಾರಂಭವಾಗಲಿದ್ದು ಪದೇ ಪದೇ ಬಳ್ಳಾರಿಯಿಂದ ಆರೋಪಿ ಕರೆತರಲು ಸಾಧ್ಯವಿಲ್ಲ ಎಂದು ವಾದಿಸಿದರು. ಇದನ್ನೂ ಓದಿ: ಎ1 ಆರೋಪಿ ಪವಿತ್ರಾ ಗೌಡಗೆ ಮತ್ತೆ ಶಾಕ್ – ಜಾಮೀನು ಅರ್ಜಿ ವಜಾ
5 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಪ್ರಕರಣದಲ್ಲಿ 272 ಸಾಕ್ಷಿಗಳಿದ್ದಾರೆ. ಹೀಗಿರುವಾಗ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲಿ (Video Conference) ವಿಚಾರಣೆ ಹೇಗೆ ಮಾಡಲಾಗುತ್ತದೆ? ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಷಾನುಗಟ್ಟಲೇ ಮಾಡಲು ಸಾಧ್ಯವಿಲ್ಲ. ಕೆಲವು ಅಂಶಗಳನ್ನು ಕೋರ್ಟ್‌ನಲ್ಲಿ ಕೇಳಬೇಕಾಗುತ್ತದೆ ಎಂದು ಹೇಳಿದರು.
ಜೈಲಾಧಿಕಾರಿಗಳು ಮ್ಯಾನ್ಯುಯಲ್ ಪ್ರಕಾರ ಎಲ್ಲವನ್ನೂ ನೀಡಲಾಗಿದೆ. ಒಬ್ಬರಿಗೆ ಕೊಟ್ಟರೆ 3 ಸಾವಿರ ಆರೋಪಿಗಳಿಗೂ ನೀಡಬೇಕಾಗುತ್ತದೆ ಎಂದು ಮತ್ತೋರ್ವ ವಕೀಲ ಸುನೀಲ್ ಕೂಡ ವಾದಿಸಿದರು. ಎಸ್‌ಪಿಪಿ ಪ್ರಸನ್ನ ಕುಮಾರ್ ವಾದಿಸಲು ಮುಂದಾದಾಗ ಕೋರ್ಟ್ ನಾಳೆ ಸಂಜೆ 4 ಗಂಟೆಗೆ ವಿಚಾರಣೆ ಮುಂದೂಡಿಕೆ ಮಾಡಿತು.