ಅಸಭ್ಯ ವರ್ತನೆ, ಟಿವಿಗಾಗಿ ಕಿರಿಕಿರಿ – ದರ್ಶನ್‌ಗೆ ಜೈಲರ್ ವಾರ್ನಿಂಗ್

Public TV
1 Min Read

ಬಳ್ಳಾರಿ: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದು ಬಳ್ಳಾರಿ ಜೈಲಿಗೆ ವರ್ಗಾವಣೆಯಾಗಿದ್ದ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ಗೆ ಜೈಲಾಧಿಕಾರಿಗಳು ಕ್ಲಾಸ್‌ ಮಾಡಿದ್ದಾರೆ.

 ಅಹಂಕಾರ, ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ಮಾಡುತ್ತಿರುವ  ದರ್ಶನ್‌ಗೆ  ಜೈಲಾಧಿಕಾರಿಗಳು ಪಾಠ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜನಸಂಖ್ಯೆ ಇಳಿಕೆ, ಆರ್ಥಿಕ ಸಂಕಷ್ಟ – ಚೀನಾದಲ್ಲಿ ನಿವೃತ್ತಿ ವಯಸ್ಸು ಏರಿಕೆ

 

 ಜೈಲಿನಲ್ಲಿ ಇರುವಷ್ಟು ದಿನ ಜೈಲು ನಿಯಮಗಳನ್ನು ಪಾಲನೆ ಮಾಡಬೇಕು. ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗುತ್ತದೆ ಎಂದು ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ಆದರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಖಾರವಾಗಿ ಹೇಳಿದ್ದಾರೆ. ಇದನ್ನೂ ಓದಿ: ನನಗೆ ಈ ಟಿವಿ ಬೇಡ, ತೆಗೆದುಕೊಂಡು ಹೋಗಿ: ದರ್ಶನ್‌

ಪದೇ ಪದೇ ಸೌಲಭ್ಯಗಳಿಗಾಗಿ ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದೀರಿ. ನಾವು ಕಾನೂನು ಪ್ರಕಾರ ಏನು ಸಾಧ್ಯ ಅಷ್ಟು ಮಾತ್ರ ಕೊಡುತ್ತೇವೆ. ಹೆಚ್ಚಿನದು ಬೇಕು ಅಂದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಎಂದು ಜೈಲರ್‌ ಎಚ್ಚರಿಕೆ ನೀಡಿದ್ದಾರೆ ಎಂಬ ವಿಚಾರವನ್ನು ಮೂಲಗಳು ತಿಳಿಸಿವೆ.

 

Share This Article