ದರ್ಶನ್‌ ಮಧ್ಯಂತರ ಜಾಮೀನು ಆದೇಶ ನಾಳೆಗೆ

Public TV
1 Min Read

– ಬೇಲ್‌ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್‌ (Darshan) ಮಧ್ಯಂತರ ಜಾಮೀನು ಆದೇಶವನ್ನು ಹೈಕೋರ್ಟ್‌ ನಾಳೆಗೆ ಕಾಯ್ದಿರಿಸಿದೆ.

ಮಧ್ಯಂತರ ಜಾಮೀನು ಕೋರಿ ನಟ ದರ್ಶನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇಂದು ನಡೆಸಿತು. ಆರೋಪಿ ಪರ ವಕೀಲ ಸಿ.ವಿ.ನಾಗೇಶ್‌ ಹಾಗೂ ಪ್ರಾಸಿಕ್ಯೂಷನ್‌ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನಕುಮಾರ್‌ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ ಆದೇಶವನ್ನು ನಾಳೆಗೆ ಕಾಯ್ದಿರಿಸಿದೆ. ದರ್ಶನ್‌ ಜಾಮೀನು ಭವಿಷ್ಯ ಬುಧವಾರ ನಿರ್ಧಾರ ಆಗಲಿದೆ. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಜಾಮೀನು – ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ

ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್‌, ಆಪ್ತೆ ಪವಿತ್ರಾಗೌಡ ಹಾಗೂ ಇಬ್ಬರು ಸಹಚರರ ಜಾಮೀನು ಅರ್ಜಿಯನ್ನು ಅ.14 ರಂದು 57ನೇ ಸಿಸಿಹೆಚ್‌ ನ್ಯಾಯಾಲಯವು ವಜಾಗೊಳಿಸಿತ್ತು.

ಕೊಲೆ ಕೇಸ್‌ನಲ್ಲಿ ಜೂ.11 ರಂದು ದರ್ಶನ್‌ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಪೊಲೀಸರ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದನ್ನೂ ಓದಿ: BBK 11: ಕಿಚ್ಚನ ಶೋನಲ್ಲಿ ದರ್ಶನ್ ನಟನೆಯ ‘ನವಗ್ರಹ’ ರೀ ರಿಲೀಸ್ ವಿಚಾರ ಚರ್ಚೆ

Share This Article