ಬೆಂಗಳೂರಿಗೆ ನಟ ದರ್ಶನ್‌ ಎಂಟ್ರಿ

Public TV
1 Min Read

– ಜೈಲಿನಿಂದ ಬಿಡುಗಡೆ ಬಳಿಕ ಸೀದ ಹೊಸಕೆರೆಹಳ್ಳಿ ಪತ್ನಿ ಮನೆಗೆ ‘ಕಾಟೇರ’
– ಮಾರ್ಗದುದ್ದಕ್ಕೂ ನೆರೆದಿದ್ದ ಫ್ಯಾನ್ಸ್‌ ಕಡೆ ಕೈ ಬೀಸಿದ ದರ್ಶನ್‌

ಬೆಂಗಳೂರು: ಬಳ್ಳಾರಿ ಜೈಲಿನಿಂದ ಸಂಜೆ ಹೊರಟಿದ್ದ ನಟ ದರ್ಶನ್‌ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. ಕಾರು ಬಂದ ಮಾರ್ಗದುದ್ದಕ್ಕೂ ಅಭಿಮಾನಿಗಳು ನಿಂತು ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿ ಫ್ಯಾನ್ಸ್‌ ನೆರದಿದ್ದರು. ದರ್ಶನ್‌ ಕಾರನ್ನು ಕಂಡ ತಕ್ಷಣ ಜಯಘೋಷ ಕೂಗಿದರು. ಕಾರು ಮುಂದೆ ಪಾಸ್‌ ಆಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು.

ಸಾದರಹಳ್ಳಿ ಗೇಟ್‌ ಬಳಿ ಅಭಿಮಾನಿಗಳು ದರ್ಶನ್‌ ಧರಿಸಿದ್ದ ಟೀ-ಶರ್ಟ್‌ ಧರಿಸಿ, ನಟನ ಫೋಟೊ ಹಿಡಿದು ನಿಂತಿದ್ದರು. ದರ್ಶನ್‌ ಕಂಡು ಸಂತಸ ವ್ಯಕ್ತಪಡಿಸಿದರು.

ದರ್ಶನ್‌ ಆರ್‌.ಆರ್‌. ನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ದರ್ಶನ್‌ ನಿವಾಸದ ಬಳಿ ಮೂವರು ಪಿಎಸ್‌ಐ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ದರ್ಶನ್‌ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅವರ ನಿವಾಸಕ್ಕೆ ತೆರಳಿದರು.

ಜೈಲಿನಿಂದ ಬಿಡುಗಡೆ ಬಳಿಕ ಸೀದ ಹೊಸಕೆರೆಹಳ್ಳಿಯ ಫ್ಲಾಟ್‌ಗೆ ತಲುಪಿದರು.

Share This Article