ಬಿಜಿಎಸ್‌ ಆಸ್ಪತ್ರೆಯಿಂದ ಕೋರ್ಟ್‌ಗೆ ಆಗಮಿಸಿದ ದರ್ಶನ್‌

Public TV
0 Min Read

ಬೆಂಗಳೂರು: ಬಿಜಿಎಸ್‌ ಆಸ್ಪತ್ರೆಯಲ್ಲಿದ್ದ  ನಟ ದರ್ಶನ್‌ ಅವರು ಈಗ ಜಾಮೀನು ಪ್ರಕ್ರಿಯೆಗಾಗಿ 57ನೇ ಸಿಸಿಹೆಚ್  ಕೋರ್ಟ್‌ಗೆ ಆಗಮಿಸಿದ್ದಾರೆ.

ಈ ಮೊದಲು ದರ್ಶನ್‌ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಹಿನ್ನೆಲೆಯಲ್ಲಿ 6 ವಾರಗಳ  ಜಾಮೀನು ಸಿಕ್ಕಿತ್ತು. ಹೈಕೋರ್ಟ್‌ ವಿಚಾರಣೆಯ ಸಮಯದಲ್ಲಿ ದರ್ಶನ್‌ ಪರ ವಕೀಲರು ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದರು.

ಶುಕ್ರವಾರ ದರ್ಶನ್‌ ಅವರಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.  ಈಗ ಜಾಮೀನಿಗೆ ಸಂಬಂಧಿಸಿದಂತೆ ಕೆಲ ಪ್ರಕ್ರಿಯೆಗಳನ್ನು ನಡೆಸಬೇಕಾದ ಕಾರಣ  ದರ್ಶನ್‌  ಕೋರ್ಟ್‌ಗೆ ಬಂದಿದ್ದಾರೆ.

ನ್ಯಾಯಾಲಯದ ಪ್ರಕ್ರಿಯೆ ಮುಗಿಸಿದ ಬಳಿಕ ದರ್ಶನ್‌ ಮತ್ತೆ ಆಸ್ಪತ್ರೆಗೆ ತೆರಳುತ್ತಾರೆ ಎಂದು ವಕೀಲರು ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

Share This Article