ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್‌ಗೆ ಮತ್ತೆ ನಿರಾಸೆ – ಅ.8 ಕ್ಕೆ ವಿಚಾರಣೆ ಮುಂದೂಡಿಕೆ

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ (Renukaswamy Murder Case) ಕೊಲೆ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ (Darshan) ಮತ್ತೆ ನಿರಾಸೆಯಾಗಿದೆ. ಅರ್ಜಿ ವಿಚಾರಣೆಯನ್ನು ಅ.8 ಕ್ಕೆ ಮುಂದೂಡಲಾಗಿದೆ.

ಇಂದು ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್‌ ಅವರು ಸುದೀರ್ಘ ವಾದ ಮಂಡಿಸಿದರು. ಪ್ರತಿವಾದಕ್ಕೆ ಎಸ್‌ಪಿಪಿ ಅವಕಾಶ ಕೇಳಿದರು. ಹೀಗಾಗಿ ವಿಚಾರಣೆಯನ್ನು ಮಂಗಳವಾರಕ್ಕೆ ಕೋರ್ಟ್‌ ಮುಂದೂಡಿಕೆ ಮಾಡಿದೆ. ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರ ಸಚಿವರಾದ್ರೂ ರಾಜ್ಯಕ್ಕೆ ಪ್ರಯೋಜನ ಆಗ್ತಿಲ್ಲ: ಕೃಷ್ಣಬೈರೇಗೌಡ ಟಕ್ಕರ್‌

ಆರೋಪಿಗಳಾದ ಪವಿತ್ರಾಗೌಡ ಮತ್ತು ರವಿಶಂಕರ್ ಜಾಮೀನು ಅರ್ಜಿ ವಿಚಾರಣೆಯನ್ನೂ ಮಂಗಳವಾರಕ್ಕೆ ಮುಂದೂಡಲಾಗಿದೆ. ಅಂದು ಮಧ್ಯಾಹ್ನ 12:30 ಕ್ಕೆ ವಿಚಾರಣೆ ನಡೆಯಲಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್ ಪರ ವಕೀಲ ಸುನೀಲ್, ಪ್ರಕರಣ ಸಂಬಂಧ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದಾರೆ. ಪ್ರಕರಣವನ್ನು ಹೇಗೆ ತಿರುಚಿದ್ದಾರೆ, ಹೇಗೆ ದರ್ಶನ್ ಸೇರಿ ಇತರೆ ಆರೋಪಿಗಳನ್ನು ಸಿಲುಕಿಸಿದ್ದಾರೆ ಅಂತಾ ವಾದ ಮಾಡಿದ್ರು. ವಾದವನ್ನು ಆಲಿಸಿದ ನ್ಯಾಯಾಲಯ ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರದ ಗುಪ್ತಚರ ಸಂಸ್ಥೆಗಳು ಏನ್‌ ಮಾಡ್ತಿವೆ – RAW, IB ವಿದೇಶಿಗರನ್ನು ಹಿಡಿದು ಹಾಕ್ಬೇಕು: ‌ಪರಮೇಶ್ವರ್‌

ಮಂಗಳವಾರ ಇತರೆ ಆರೋಪಿಗಳ ಪರ ವಕೀಲರು ವಾದ ಮಂಡನೆ ಮಾಡ್ತಾರೆ. ಪೊಲೀಸರ ತನಿಖೆಯಲ್ಲಿನ ಲೋಪಗಳು ಮತ್ತು ಉಲ್ಲಂಘನೆಗಳ ಬಗ್ಗೆ ವಾದ ಮಂಡಿಸಲಿದ್ದಾರೆ. ನಂತರ ಎಸ್‌ಪಿಪಿಗೆ ವಾದಕ್ಕೆ ಅವಕಾಶ ನೀಡಲಾಗುವುದು. ಎರಡು ಕಡೆ ವಾದದ ನಂತರ ನ್ಯಾಯಾಲಯ ಅದೇಶ ನೀಡಲಿದೆ ಎಂದು ಹೇಳಿದರು.

Share This Article