ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Public TV
1 Min Read

– ಸೆ.9 ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ
– ದರ್ಶನ್ ಹೋಗುವುದನ್ನು ನೋಡಿಕೊಂಡು ನಿಂತಿದ್ದ ಪವಿತ್ರಾ ಗೌಡ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಉಳಿದ ಆರೋಪಿಗಳು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾದರು.

ಸಿಸಿಹೆಚ್ 63ರ ನ್ಯಾಯಾಧೀಶರ ಮುಂದೆ ಆರೋಪಿಗಳು ಹಾಜರಾದರು. ಚಾರ್ಜ್ ಫ್ರೇಮ್‌ಗೆ ನ್ಯಾಯಾಧೀಶರು ಸಮಯ ನಿಗದಿಪಡಿಸಿದರು. ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್

ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್, ಪುಟ್ಟಸ್ವಾಮಿ, ರಾಘವೇಂದ್ರ, ನಂದೀಶ್, ರವಿಶಂಕರ್, ನಾಗರಾಜು, ಲಕ್ಷ್ಮಣ್, ದೀಪಕ್ ಕುಮಾರ್ ನ್ಯಾಯಾಲಯದ ಮುಂದೆ ಹಾಜರಿದ್ದರು. ವಿನಯ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಗೈರಾಗಿದ್ದರು.

ವಿಚಾರಣೆ ಬಳಿಕ ಪವಿತ್ರಾ ಗೌಡ ಕೋರ್ಟ್ ಆವರಣದಲ್ಲೇ ನಿಂತಿದ್ದರು. ದರ್ಶನ್ ಹೋಗುವುದನ್ನು ನೋಡಿಕೊಂಡು ನಿಂತಿದ್ದರು. ಆದರೆ, ಪವಿತ್ರಾ ಗೌಡ ಕಡೆ ತಿರುಗಿ ನೋಡದೇ ದರ್ಶನ್ ತೆರಳಿದರು. ವಿಚಾರಣೆಗೆ ಹಾಜರಾಗಿದ್ದ ದರ್ಶನ್‌ಗೆ ನಟ ಧನ್ವೀರ್ ಸಾಥ್ ಕೊಟ್ಟಿದ್ದರು.

Share This Article