ದರ್ಶನ್ ಇಂದೇ ಹೈಕೋರ್ಟ್ ಮೊರೆ ಹೋಗ್ತಾರಾ? – ಅರ್ಜಿ ಸಲ್ಲಿಸಿದ್ರೆ ಮುಂದೇನು?

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದು, ಆರೋಪಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಹಲವು ಅಂಶಗಳನ್ನು ಉಲ್ಲೇಖಿಸಿ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈಗ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಮುಂದೇನು ಎಂಬ ಪ್ರಶ್ನೆಗಳಿಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದ ದರ್ಶನ್ ಮೆಡಿಕಲ್ ರಿಪೋರ್ಟ್

ಹೈಕೋರ್ಟ್ ಮೆಟ್ಟಿಲೇರಿದರೆ ಮುಂದೇನು?
ಮೊದಲಿಗೆ ಜಾಮೀನು ಅರ್ಜಿ ನಿರಾಕರಣೆಯ ಆದೇಶದ ಪ್ರತಿಯನ್ನು ವಕೀಲರು ಪಡೆದುಕೊಳ್ಳಲಿದ್ದಾರೆ. ಯಾವ ಗ್ರೌಂಡ್ಸ್ ಮೇಲೆ ಜಾಮೀನು ನಿರಾಕರಣೆ ಮಾಡಿದ್ದಾರೆ ಅಂತಾ ತಿಳಿದುಕೊಳ್ಳಲಿದ್ದಾರೆ. ಆ ಬಳಿಕ ದರ್ಶನ್ ಹಾಗೂ ಕುಟುಂಬಸ್ಥರ ಜೊತೆ ಮುಂದಿನ ಸಾಧಕ-ಬಾಧಕಗಳ ಚರ್ಚಿಸಬೇಕು. ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ವಕಾಲತ್ತಿಗೆ ಸಹಿ ಪಡೆಯಬೇಕು. ಆ ಬಳಿಕ ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

ಕೆಲ ದಿನಗಳಲ್ಲಿ ದರ್ಶನ್ ಜಾಮೀನಿನ ಅರ್ಜಿಯ ಲಿಸ್ಟ್ ಆಗಬಹುದು. ಜಾಮೀನು ಅರ್ಜಿ ನಿಗದಿ ದಿನಾಂಕದಂದು ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೇಳಬಹುದು. ಮೂರ್ನಾಲ್ಕು ದಿನಗಳ ಕಾಲ ಆಕ್ಷೇಪಣೆ ಸಲ್ಲಿಕೆಗೆ ಸರ್ಕಾರಿ ವಕೀಲರಿಗೆ ಸಮಯಾವಕಾಶ ಸಿಗಬಹುದು. ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ನಲ್ಲಿ ಜಾಮೀನಿಗೆ ವಾದ ಮಂಡನೆಯಾಗಲಿದೆ. ಇದನ್ನೂ ಓದಿ: ದರ್ಶನ್‌, ಪವಿತ್ರಾಗೆ ನೋ ರಿಲೀಫ್‌ – ಕೋರ್ಟ್‌ ಜಾಮೀನು ನೀಡದ್ದು ಯಾಕೆ?

ಪ್ರತಿಯಾಗಿ ಎಸ್‌ಪಿಪಿಯಿಂದ ಜಾಮೀನು ನೀಡದಂತೆ ಪ್ರತಿವಾದ ಮಾಡಲಾಗುತ್ತದೆ. ವಾದ ಪ್ರತಿವಾದ ಆಲಿಸಿದ ಬಳಿಕ ಮಾನ್ಯ ನ್ಯಾಯಾಧೀಶರು ಆದೇಶ ಪ್ರಕಟ ಮಾಡಲಿದ್ದಾರೆ. ಅಲ್ಲಿಯವರೆಗೂ ದರ್ಶನ್‌ಗೆ ಬಳ್ಳಾರಿ ಜೈಲು, ಪವಿತ್ರಾಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

Share This Article