ದರ್ಶನ್‌ಗೆ ಬೆನ್ನುನೋವು – ಜೈಲು ವೈದ್ಯರಿಂದ ನಟನ ಆರೋಗ್ಯ ತಪಾಸಣೆ

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ (Darshan) ಬೆನ್ನುನೋವು ಇದೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮೆಡಿಕಲ್ ರಿಪೋರ್ಟ್ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಧಿಕಾರಿಗಳು ಆರೋಪಿ ದರ್ಶನ್‌ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.

ಜೈಲು ಡಾಕ್ಟರ್ ಮೂಲಕ ದರ್ಶನ್ ವೈದ್ಯಕೀಯ ರಿಪೋರ್ಟ್ ಪರಿಶೀಲನೆ ನಡೆಸಲಾಯಿತು. ಬೆನ್ನು ನೋವಿನಿಂದಾಗಿ ದರ್ಶನ್‌ಗೆ ಮೋಷನ್ ಸಮಸ್ಯೆ ಕೂಡ ಆಗಿದೆ. ಹೀಗಾಗಿ ವೆಸ್ಟರ್ನ್ ಟಾಯ್ಲೆಟ್ ಅಥವಾ ಸರ್ಜಿಕಲ್ ಚೇರ್‌ಗೆ ನಟ ಮನವಿ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕೈದಿ ನಂಬರ್‌ ಆಯ್ತು.. ಈಗ ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಟ್ರೆಂಡ್‌

12 ಗಂಟೆ ಸುಮಾರಿಗೆ ಜೈಲು ವೈದ್ಯರು ದರ್ಶನ್ ಆರೋಗ್ಯ ತಪಾಸಣೆ ಮಾಡಿದರು. ಬೆನ್ನು ನೋವಿನ ತೀವ್ರತೆ ಬಗ್ಗೆ ವೈದ್ಯಕೀಯ ತಪಾಸಣೆ ಬಳಿಕ ಡಿಐಜಿಗೆ ಸಲ್ಲಿಕೆ ಮಾಡಲಾಗುವುದು. ಸದ್ಯ ಸಾಮಾನ್ಯ ಕೈದಿಯಂತೆ ದರ್ಶನ್‌ಗೂ ಜೈಲಲ್ಲಿ ತಪಾಸಣೆ ನಡೆಸಲಾಗಿದೆ. ಬೆನ್ನು ನೋವಿನ ಕಾರಣ ಕೆಲವು ಮಾತ್ರೆಗಳ ಬಗ್ಗೆ ದರ್ಶನ್ ಮನವಿ ಮಾಡಿದ್ದರು. ವೈದ್ಯರ ತಪಾಸಣೆ ಬಳಿಕ ಅಗತ್ಯ ಇದ್ದರೆ ಸರ್ಕಾರಿ ಆಸ್ಪತ್ರೆಯ ಮೆಡಿಸಿನ್‌ಗಳನ್ನ ಕೊಡುವುದಾಗಿ ಜೈಲಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ಎ2 ಆರೋಪಿ ನಟ ದರ್ಶನ್‌ಗೆ ಮಧ್ಯಾಹ್ನದ ಊಟ ನೀಡಲಾಯಿತು. ಪತ್ನಿ ವಿಜಯಲಕ್ಷ್ಮಿ ತಂದಿದ್ದ ತಿನಿಸುಗಳೊಂದಿಗೆ ದರ್ಶನ್ ಊಟ ಮಾಡಿದರು. ರಾಗಿ ಮುದ್ದೆ, ಅನ್ನ, ಸಾಂಬಾರು, ಮಜ್ಜಿಗೆ ಊಟ ಮಾಡಿದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ದರ್ಶನ್‌ಗಾಗಿ ಬಟ್ಟೆ, ಡ್ರೈಪ್ರೂಟ್ಸ್ ತಂದ ವಿಜಯಲಕ್ಷ್ಮಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ದರ್ಶನ್‌ಗೆ ಅಭಯ

ಜೈಲಿನಲ್ಲಿ ದರ್ಶನ್ ಆರೋಗ್ಯ ತಪಾಸಣೆ ನಡೆಸಲಾಯಿತು. ಸ್ಟಾಫ್ ನರ್ಸ್ಗಳು ಹಾಗೂ ಡ್ಯೂಟಿ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಲಾಯಿತು. ಬಿಪಿ ಹಾಗೂ ಶುಗರ್ ಪರೀಕ್ಷೆ ಮಾಡಲಾಯಿತು. ಇದೇ ವೇಳೆ ನಿನ್ನೆ ದರ್ಶನ್ ಕುಟುಂಬಸ್ಥರು ನೀಡಿದ ವರದಿಯನ್ನು ವೈದ್ಯರು ಪರಿಶೀಲಿಸಿದರು. ನಾಳೆಯೂ ಹಿರಿಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ.

Share This Article