ದರ್ಶನ್ ಜೊತೆ ಬಂಧನವಾಗಿರೋ ಆರೋಪಿಗಳ ಕುಟುಂಬದ ಸ್ಥಿತಿ ಶೋಚನೀಯ!

Public TV
2 Min Read

– ಕಣ್ಣೀರಲ್ಲಿ ಕೈತೊಳೆಯುತ್ತಿರೋ ಆರೋಪಿ ನಂದೀಶ್ ಕುಟುಂಬ..!

ಮಂಡ್ಯ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗುವ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ. ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ದರ್ಶನ್ ಜೊತೆ 14 ಮಂದಿ ಜೈಲು ಸೇರಿದ್ದಾರೆ. ಇವರ ಪೈಕಿ ಕೆಲ ಕುಟುಂಬಗಳು ಕಡು ಬಡತನತದಲ್ಲಿವೆ. ಮನೆಗೆ ಆಧಾರವಾಗಿ ಇದ್ದವರು ಇದೀಗ ಜೈಲು ಸೇರಿರುವ ಕಾರಣ ಮನೆಯಲ್ಲಿರುವವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇತ್ತ ನಮ್ಮ ಬಾಸ್ ಹಾಗೆ ಹೀಗೆ ಎಂದು ಜಾಗಟೆ ಬಾರಿಸುವ ಅಭಿಮಾನಿಗಳು (Darshan Fans) ಸೌಜನ್ಯಕ್ಕೂ ಆ ಕುಟುಂಬಗಳನ್ನು ಸಂಪರ್ಕಿಸುವ ಕೆಲಸ ಮಾಡಿಲ್ಲ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗುವ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ. ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ (Darshan) ಜೊತೆ ಹಲವರು ಭಾಗಿಯಾಗಿದ್ದು ಇದೀಗ ಕೆಲವರು ಜೈಲುಪಾಗಿದ್ದಾರೆ. ಇವ್ರ ಪೈಕಿ ಹಲವರು ಕಡುಬಡತನದಲ್ಲಿದ್ದವರೂ ಆಗಿದ್ದಾರೆ. ಆ ಬಡ ಕುಟುಂಬಗಳು ಕಣ್ಣೀರು ಹಾಕುವ ಸ್ಥಿತಿ ಬಂದೊದಗಿದೆ. ಬಾಸ್ ಬಾಸ್ ಎಂದು ಕೂಗುವ ಅಭಿಮಾನಿಗಳು ಈ ಕುಟುಂಬದ ಕಡೆ ಇದುವರೆಗೆ ತಲೆ ಸಹ ಹಾಕಿಲ್ಲ.

ಹೌದು. ಮಂಡ್ಯದ ಚಾಮಲಪುರ ಗ್ರಾಮದ ನಂದೀಶ್ ಎಂಬಾತ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ5 ಆರೋಪಿಯಾಗಿ ಬಂಧಿತನಾಗಿದ್ದಾನೆ. ಇವರ ಕುಟುಂಬ ಬಡತನದಲ್ಲಿದ್ದು, ನಂದೀಶನ ಸಂಪಾದನೆ ಹಾಗೂ ಇವರ ತಂದೆ, ತಾಯಿ ಮಾಡುತ್ತಿದ್ದ ಕೂಲಿ ಕೆಲಸದಿಂದ ಸಂಸಾರ ಸಾಗುತ್ತಿತ್ತು. ಇದೀಗ ನಂದೀಶ್ ಜೈಲು ಪಾಲಾಗಿರುವುದರಿಂದ ಇಡೀ ಕುಟುಂಬ ಕಂಗಾಲಾಗಿದೆ. ನಂದೀಶನ ತಾಯಿ ಭಾಗ್ಯಮ್ಮಗೆ ಅಸ್ತಮ ಕಾಯಿಲೆ ಇದ್ದು, ಇದೀಗ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಆರ್ಥಿಕವಾಗಿ ಹಿಂದೆ ಉಳಿದಿರುವ ಈ ಕುಟುಂಬಕ್ಕೆ ನಂದೀಶ್ ಬೆನ್ನೆಲುಬಾಗಿದ್ದ, ಇದೀಗ ನಂದೀಶ್ ಇಲ್ಲ ಹಿರಿ ಜೀವಗಳು ಕಣ್ಣೀರು ಹಾಕ್ತಿದೆ.

ಇನ್ನೊಂದೆಡೆ ದರ್ಶನ್‌ಗೆ ಜಾಮೀನು ನೀಡಲು ಅವರ ಪರವಾಗಿ ವಕೀಲರು ಕೆಲಸ ಮಾಡ್ತಾ ಇದ್ದಾರೆ. ಆದರೆ ಈ ನಂದೀಶ್ ಹಾಗೂ ಕೆಲವರ ಪರ ವಕಾಲತ್ತು ವಹಿಸಲು ವಕೀಲರೇ ಇಲ್ಲವಾಗಿದ್ದಾರೆ, ಅಲ್ಲದೇ ನಂದೀಶ್ ಮನೆ ಬಳಿಗೆ ಈ ಬಗ್ಗೆ ಯಾರು ಸಹ ಹೋಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬೆ ಹೊಡೆಯುವ ಒಬ್ಬ ಅಭಿಮಾನಿಯೂ ಸಹ ಈ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿಲ್ಲ. ಇದೀಗ ನಂದೀಶ್‌ಗೆ ಜಾಮೀನು ನೀಡಲು ಲಕ್ಷಾಂತರ ರೂ. ಬೇಕು, ನಮ್ಮ ಬಳಿ ಹಣವಿಲ್ಲ. ಜೊತೆಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿ ಮಗನ ಮುಖ ನೋಡಲು ನಮ್ಮ ಬಳಿ ಹಣವಿಲ್ಲ ಅಂತ ಚಿಂತಾಕ್ರಾಂತರಾಗಿದ್ದಾರೆ.

ಇಂದು (ಶನಿವಾರ) ನಂದೀಶ್‌ನನ್ನ ನೋಡಲು ಊರಿನವರ ಕಾರು ತಗೊಂಡು ಡಿಸೇಲ್ ಹಾಕಿಸಿಕೊಂಡು ಅವರ ಕುಟುಂಬಸ್ಥರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗ್ತಾ ಇದೀವಿ. ಮುಂದೆ ಏನು ಅಂತಾನೇ ತಿಳಿಯುತ್ತಾ ಇಲ್ಲ ಎಂದು ಇವರ ಸಂಬಂಧಿಕರು ಹೇಳ್ತಾ ಇದ್ದಾರೆ. ಒಟ್ಟಿನಲ್ಲಿ ದರ್ಶನ್‌ ಗ್ಯಾಂಗ್‌ನ ಕ್ರೂರತೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದ ಹಾಗೆ ಮಾತಾಡುವವರು ಆ ಕುಟುಂಬಸ್ಥರ ಕಣ್ಣೀರು ಒರೆಸಲು ಮುಂದಾಗುತ್ತಾರಾ ಕಾದು ನೋಡಬೇಕಿದೆ.

Share This Article