ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಆಗಸ್ಟ್‌ 27ಕ್ಕೆ ಮತ್ತೆ ವಿಚಾರಣೆ‌

Public TV
1 Min Read

ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‍ ನಲ್ಲಿ ಜೈಲು ಪಾಲಾಗಿರೋ ಮಾಜಿ ನಟಿ ಪವಿತ್ರಾ ಗೌಡ (Pavithra Gowda) ಮೊನ್ನೆಯಷ್ಟೇ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ಜಾಮೀನು ನೀಡದಂತೆ ಪೊಲೀಸರ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ನ್ಯಾಯಾಧೀಶ ಜೈಶಂಕರ್ ಜಾಮೀನು ಅರ್ಜಿಯನ್ನು ಆ.27ಕ್ಕೆ ಮುಂದೂಡಿದರು.

ಚಾರ್ಜ್ ಶೀಟ್ ಸಲ್ಲಿಸೋಕೆ ಇನ್ನೂ ಕೆಲವು ದಿನಗಳು ಬಾಕಿ ಇರೋ ಬೆನ್ನಲ್ಲೇ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ದರ್ಶನ್ ದೂರಾದ ಬೆನ್ನಲ್ಲೇ ಏಕಾಂಗಿಯಾಗಿ ಹೋರಾಟ ಮಾಡ್ತಿರೋ ಪವಿತ್ರಾ ಗೌಡಗೆ ಆದಷ್ಟು ಬೇಗ ಜಾಮೀನು ಸಿಗಲಿದೆ ಎನ್ನುತ್ತಿದ್ದಾರೆ ಕಾನೂನು ಪಂಡಿತರು.

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ತನ್ನದೇನೂ ಪಾತ್ರವಿಲ್ಲ. ನನಗೆ ಮಸೇಜ್ ಬಂದಿದ್ದನ್ನು ದರ್ಶನ್ ಗೆ ತಿಳಿಸಿದ್ದೆ. ಆನಂತರ ಏನಾಯ್ತು ಅನ್ನೋದು ನನ್ನ ಗಮನಕ್ಕೆ ಬಂದಿಲ್ಲ ಅಂತ ಪವಿತ್ರಾ ಗೌಡಪರ ವಕೀಲರ ವಾದ ಮಾಡಲಿದ್ದಾರೆ ಅಂತಿವೆ ಮೂಲಗಳು. ಜೊತೆಗೆ ಮಹಿಳೆ ಅನ್ನೋ ಕಾರಣದಿಂದಾಗಿ ದರ್ಶನ್ ಗಿಂತ ಮೊದಲೇ ಪವಿತ್ರಾ ಗೌಡಗೆ ಜಾಮೀನು ಸಿಗಲಿದೆಯಂತೆ. ಆ.27ಕ್ಕೆ ಏನಾಗತ್ತೋ ಕಾದು ನೋಡಬೇಕು.

Share This Article