ಕೋಟಿ ಮೌಲ್ಯದ ಕಾರಿಗಾಗಿ ಪವಿತ್ರಾ ಮುನಿಸು- ಕೋಪ ಶಮನಕ್ಕೆ ಆಯ್ತಾ ಸ್ವಾಮಿ ಮರ್ಡರ್?

Public TV
1 Min Read

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಇದೀಗ ಆಪ್ತೆ ಪವಿತ್ರಾ ಗೌಡ ಅವರ ಮುನಿಸು ಶಮನ ಮಾಡಲು ರೇಣುಕಾಸ್ವಾಮಿ ಹತ್ಯೆ ನಡೆಯಿತಾ ಎಂಬ ಮಾಹಿತಿ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಸಣ್ಣ ವಿಚಾರವೊಂದಕ್ಕೆ ನಟ ದರ್ಶನ್ ಜೊತೆ ಆರೋಪಿ ಪವಿತ್ರಾ ಗೌಡ (Pavithra Gowda) ಇತ್ತೀಚೆಗೆ ಮುನಿಸಿಕೊಂಡಿದ್ದರಂತೆ. ಕೋಟಿ ಮೌಲ್ಯದ ಕಾರು ಕೊಡಿಸುವ ವಿಚಾರವಾಗಿ ದರ್ಶನ್ (Darshan) ಹಾಗೂ ಪವಿತ್ರಾ ಗೌಡ ನಡುವೆ ಮನಸ್ತಾಪವಾಗಿದ್ದ ವಿಚಾರವೊಂದು ಬಯಲಾಗಿದೆ.

ದರ್ಶನ್ ದುಬೈ ಟ್ರಿಪ್ ಮುಗಿಸುಕೊಂಡು ಬರುತ್ತಿದ್ದಂತೆ ಪವಿತ್ರಾ ಗೌಡ ಕೋಟಿ ಮೌಲ್ಯದ ಕಾರಿಗೆ ಬೇಡಿಕೆ ಇಟ್ಟಿದ್ದರಂತೆ. ಈ ವೇಳೆ ದರ್ಶನ್ ಕೋಟಿ ಕಾರು ಕೊಡಿಸುವುದಕ್ಕೆ ನಿರಾಕರಿಸಿದ್ದರು. ಸದ್ಯ ದೊಡ್ಡ ಅಮೌಂಟ್ ಇಲ್ಲ ಎಂದು ಕಾರಣ ನೀಡಿ ಪವಿತ್ರಾ ಗೌಡಗೆ ಕೋಟಿ ಕಾರು ಕೋಡಿಸೊದಕ್ಕೆ ಬ್ರೇಕ್ ಹಾಕಿದ್ದರು ಎನ್ನಲಾಗಿದೆ.

ಇಷ್ಟಪಟ್ಟ ಕೋಟಿ ರೂ. ಮೌಲ್ಯದ ಕೊಡಿಸಲಿಲ್ಲ ಅನ್ನೋ ಕಾರಣಕ್ಕೆ ಹಂತಕಿ ಪವಿತ್ರಾ ಗೌಡ ಆರೋಪಿ ದರ್ಶನ್ ಜೊತೆ ಮಾತು ಬಿಟ್ಟಿದ್ದರು. ಸುಮಾರು ಒಂದು ತಿಂಗಳುಗಳ ಕಾಲ ಪವಿತ್ರಾ ಗೌಡ ದರ್ಶನ್ ಜೊತೆ ಮಾತನಾಡುವುದಕ್ಕೆ ಬ್ರೇಕ್ ಹಾಕಿದ್ದರು. ಮಾತು ಬಿಟ್ಟಿದ್ದರ ನಡುವೆ ರೇಣುಕಾಸ್ವಾಮಿ ಮೆಸೇಜ್ ಕಹಾನಿ ನಡೆದಿರುತ್ತದೆ. ಮೆಸೇಜ್ ಕಥೆ ತಿಳಿದ ಬಳಿಕ ಈ ಸಮಸ್ಯೆಯನ್ನು ಸರಿಪಡಿಸಿದರೆ ನಾವಿಬ್ಬರು ಹತ್ತಿರ ಆಗಬಹುದು ಎಂದು ನಂಬಿ ಕಿಡ್ನಾಪ್ ಪ್ರಹಸನ ನಡೆಸಿ ದರ್ಶನ್ ತಗ್ಲಾಕಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share This Article