ದರ್ಶನ್‌ & ಗ್ಯಾಂಗ್‌ಗೆ ಮತ್ತೆ ಶಾಕ್‌ ಕೊಟ್ಟ ಕಾಮಾಕ್ಷಿಪಾಳ್ಯ ಪೊಲೀಸರು

Public TV
1 Min Read

ಬೆಂಗಳೂರು: ದರ್ಶನ್‌ (Darshan) ಮತ್ತು ಗ್ಯಾಂಗ್‌ಗೆ ಕಾಮಾಕ್ಷಿಪಾಳ್ಯ ಪೊಲೀಸರು (Kamakshipalya Police) ಮತ್ತೆ ಶಾಕ್‌ ನೀಡಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದೋಷಾರೋಪಪಟ್ಟಿಯನ್ನು (Supplementary Chargesheet) 57ನೇ ಸಿಸಿಹೆಚ್‌ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ಕೆಲವು ದಾಖಲಾತಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ(FSL Report), ಆರೋಪಿಗಳ ವಿರುದ್ಧ ಇರುವ ಕೆಲವೊಂದು ಸಾಕ್ಷ್ಯ, ಕೃತ್ಯಕ್ಕೆ ಬಳಸಿದ ವಾಹನಗಳ ರಿಲೀಸ್ ಪ್ರಕ್ರಿಯೆ ದಾಖಲೆಗಳನ್ನು ಒಳಗೊಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದರು. ಇದನ್ನೂ ಓದಿ: ವಿಚಾರಣೆ ಮುಗಿಸಿ ದರ್ಶನ್‌ ಕೈ ಹಿಡಿದುಕೊಂಡು ಹೊರ ಬಂದ ಪವಿತ್ರಾ ಗೌಡ

 

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾದರು. ಪವಿತ್ರಾ ಗೌಡ ಬಿಳಿ ಬಣ್ಣದ ಸೀರೆ ಧರಿಸಿದ್ದರೆ ದರ್ಶನ್‌ ಕಪ್ಪು ಬಣ್ಣ ಡ್ರೆಸ್‌ ಧರಿಸಿದ್ದರು.

ಇಂದಿನ ವಿಚಾರಣೆಗೆ ಎ3 ಪವನ್ ಗೈರಾಗಿದ್ದರೆ ಎ11 ನಾಗರಾಜು ಕೇಸ್ ಮೇಲೆ ಹೊಸಪೇಟೆಗೆ ತೆರಳಲು ಅನುಮತಿ ನೀಡಿತು. ಆರೋಪಿಗಳ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಿತು. ಪವಿತ್ರಾ ಗೌಡಗೆ 15 ದಿನಗಳ ಕಾಲ ಹೊರರಾಜ್ಯಕ್ಕೆ ತೆರಳಲು ಕೋರ್ಟ್‌ ಅವಕಾಶ ನೀಡಿದೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

ಕಳೆದ ಬಾರಿ ಅನಾರೋಗ್ಯದ ಕಾರಣ ಹೇಳಿ ದರ್ಶನ್‌ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಜರಾಗದ್ದಕ್ಕೆ ಕೋರ್ಟ್‌ ದರ್ಶನ್‌ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು (Bail) ಸಿಕ್ಕಿದೆ. ಜಾಮೀನು ಪಡೆದರೂ ನ್ಯಾಯಾಲಯಕ್ಕೆ (Court) ಹಾಜರಾಗಬೇಕೆಂಬ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಇಂದು ಆರೋಪಿಗಳು ಕೋರ್ಟ್​ಗೆ ಹಾಜರಾಗಿದ್ದರು.

Share This Article