ರೇಣುಕಾಸ್ವಾಮಿ ಕೇಸ್ ಅರೆಬಿಯನ್ ನೈಟ್ಸ್ ಕಥೆಯಂತಿದೆ: ದರ್ಶನ್ ಪರ ಸಿ.ವಿ ನಾಗೇಶ್ ವಾದ ಹೇಗಿತ್ತು?

Public TV
1 Min Read

– ವ್ಯಾವಹಾರಕ್ಕಿಟ್ಟಿದ್ದ 37 ಲಕ್ಷ ಹಣವನ್ನ ಕೊಲೆಗೆ ಇಟ್ಟಿದ್ದ ಹಣ ಅಂದಿದ್ದಾರೆ ಪೊಲೀಸರು; ವಕೀಲರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಆರೋಪದಲ್ಲಿ ನಟ ದರ್ಶನ್‌ಗೆ ಜೈಲುವಾಸ ಮುಂದುವರಿದಿದೆ. ಬೆಂಗಳೂರಿನ ಸೆಷನ್ಸ್ ಕೋರ್ಟ್ ವಿಚಾರಣೆಯನ್ನು ಅ.8ರ ಮಂಗಳವಾರ ಮಧ್ಯಾಹ್ನ 12:30ಕ್ಕೆ ಮುಂದೂಡಿದೆ.

ದರ್ಶನ್ ಬೇಲ್‌ಗಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ಇವತ್ತೂ ಪ್ರಬಲ ವಾದ ಮಂಡಿಸಿದರು. ಪೊಲೀಸರು ಇಡೀ ಪ್ರಕರಣವನ್ನೇ ತಿರುಚಿದ್ದಾರೆ. ಸಾಕ್ಷಿಗಳನ್ನು ಸೃಷ್ಟಿ ಮಾಡಿದ್ದರೆ. ಇದೊಂದು ಅರೆಬಿಯನ್ ನೈಟ್ಸ್ ಕಥೆಯಂತೆ ಇದೆ. ಪಂಚನಾಮೆಯಲ್ಲಿ ಬರೆದಿರೋದು ಸುಳ್ಳು. 13 ಆರೋಪಿಗಳ ಬಟ್ಟೆ, ಕೊಂಬೆ ಮೇಲೆ ರಕ್ತ ಇದೆ ಅಂದ್ರೆ ಆಶ್ಚರ್ಯವಾಗಿದೆ. ಇದನ್ನೂ ಓದಿ: ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ, ದರ್ಶನ್ ಹೊಡೆದಿಲ್ಲ: ಕೋರ್ಟ್‌ನಲ್ಲಿ ವಕೀಲ ಸಿ.ವಿ ನಾಗೇಶ್ ವಾದ ಹೇಗಿತ್ತು?

ದರ್ಶನ್ ವ್ಯಾವಹಾರಿಕ ಇಟ್ಟಿದ್ದ್ 37 ಲಕ್ಷ ಹಣವನ್ನು ಸೀಜ್ ಮಾಡಿ, ಕೊಲೆಗೆ ಇಟ್ಟಿದ್ದ ಹಣ ಅಂತ ಪೊಲೀಸರು ಹೇಳಿದ್ದಾರೆ. ಚಿಕ್ಕಣ್ಣ, ಚೇತನ್, ನವೀನ್ ಹೇಳಿಕೆ ದಾಖಲಿಸಿದ್ದಾರೆ. ಆದರೆ, ಚಿಕ್ಕಣ್ಣರನ್ನ ಸ್ಟೋನಿಬ್ರೂಕ್‌ಗೆ ಊಟಕ್ಕೆ ಕರೆದಿದ್ರು. ಪ್ರಕರಣದಲ್ಲಿ 6 ಮಂದಿ ಐ ವಿಟ್ನೆಸ್‌ಗಳಿದ್ದಾರೆ. 6 ಜನರ ಹೇಳಿಕೆಯಲ್ಲೂ ವ್ಯತ್ಯಾಸ ಕಂಡುಬಂದಿದೆ. ಇದನ್ನೂ ಓದಿ: ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!

ಕೇಸ್ ಪ್ರಗತಿಯನ್ನ ಡೈರಿಯಲ್ಲಿ ಉಲ್ಲೇಖ ಮಾಡೋದು ಕಡ್ಡಾಯ. ಆದರೆ, ಪೊಲೀಸರು ಕೋರ್ಟ್ಗೆ ಸಲ್ಲಿಸಿಲ್ಲ ಅಂತ ವಾದಿಸಿದ್ದಾರೆ. ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದಾರೆ. ಅಲ್ಲದೆ, ಪ್ರತಿವಾದಕ್ಕೆ ಮನವಿ ಮಾಡಿದ್ದಾರೆ. ಹಾಗಾಗಿ, ಮಂಗಳವಾರಕ್ಕೆ ವಿಚಾರಣೆಯನ್ನು ಜಡ್ಜ್ ಮುಂದೂಡಿದ್ದಾರೆ. ಅತ್ತ, ಜೈಲಿನಲ್ಲಿ ದರ್ಶನ್ ಬೇಲ್ ಟೆನ್ಷನ್‌ನಲ್ಲಿದ್ದಾರೆ. ಪವಿತ್ರಗೌಡಗೌಡ ಬೇಲ್ ಅರ್ಜಿಯೂ ಮಂಗಳವಾರವೇ ವಿಚಾರಣೆಗೆ ಬರಲಿದೆ. ಇದನ್ನೂ ಓದಿ: Bengaluru Rains | ಎಲೆಕ್ಟ್ರಾನಿಕ್ ಸಿಟಿ ಮತ್ತೆ ಜಲಾವೃತ – ಸಣ್ಣ ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ

Share This Article