Breaking: ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಾಪತ್ತೆಯಾಗಿದ್ದ ಡಿ-ಗ್ಯಾಂಗ್‌ನ 9ನೇ ಆರೋಪಿ ಬಂಧನ!

Public TV
1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಬಳಿಕ ನಾಪತ್ತೆಯಾಗಿದ್ದ ಪ್ರಕರಣದ 9ನೇ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ರಾಜು ಅಲಿಯಾಸ್‌ ಧನರಾಜು ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: Breaking: ಚಿತ್ರರಂಗಕ್ಕೆ ಕಪ್ಪುಚುಕ್ಕೆ ಬರಬಾರದು – ದರ್ಶನ್‌ ಬಂಧನ ವಿಚಾರದಲ್ಲಿ ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

ಆರೋಪಿ ಧನರಾಜು ಮೆಗ್ಗರ್‌ ಡಿವೈಸ್‌ ಬಳಸಿ ಕರೆಂಟ್‌ ಶಾಕ್‌ ನೀಡಿದ್ದ ಎನ್ನಲಾಗಿದೆ. ಎ5 ಆರೋಪಿ ನಂದೀಶ್‌ ಜೊತೆಗೂಡಿ, ಮೃತನಿಗೆ ಕರೆಂಟ್‌ ಶಾಕ್‌ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೆಗ್ಗರ್ ಡಿವೈಸ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ- ಪವಿತ್ರಾ ಐಷಾರಾಮಿ ಜೀವನ ಬಹಿರಂಗ

Share This Article