Exclusive Video | ಸೆಂಟ್ರಲ್‌ ಜೈಲಲ್ಲಿ ಕೊಲೆ ಆರೋಪಿ ದರ್ಶನ್‌ ಬಿಂದಾಸ್‌?

By
2 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder  Case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ಗೆ (Darshan) ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್‌ ಜೈಲಿನಲ್ಲಿರೋದು ಎನ್ನಲಾದ ಫೋಟೋವೊಂದು ʻಪಬ್ಲಿಕ್‌ ಟಿವಿʼಗೆ (Public TV) ಲಭ್ಯವಾಗಿದೆ.

ಹೌದು.. ಪರಪ್ಪನ ಅಗ್ರಹಾರದಲ್ಲಿರುವ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಫೋಟೋವೊಂದು ಲಭ್ಯವಾಗಿದೆ. ಈ ಫೋಟೋದಲ್ಲಿ ದರ್ಶನ್‌ ಜೈಲಿನ ಬ್ಯಾರಕ್‌ನಿಂದ ಹೊರಗೆ ರೌಡಿಗಳ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಕುಳಿತಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್‌, ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ವಿಗ್‌ ಇಲ್ಲದ ಲುಕ್‌ನಲ್ಲಿ ದರ್ಶನ್‌ ಕುಳಿತಿರುವ ಫೋಟೋ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

ಫೋಟೋ ಬೆಳಕಿಗೆ ಬರುತ್ತಿದ್ದಂತೆ ಇದೇನು ಜೈಲಾ ಇಲ್ಲ ರೆಸಾರ್ಟಾ? ಅನ್ನೋ ಪ್ರಶ್ನೆ ಎದ್ದಿದೆ. ಜೈಲಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲ, ʻಜೈಲುʼ ಅನ್ನೋದು ಉಳ್ಳವರಿಗೆ ಎಲ್ಲಾ ಸವಲತ್ತು ನೀಡುವ ಕಾಮಧೇನು? ದುಡ್ಡು ಕೊಟ್ರೆ ಏನೂ ಬೇಕಾದ್ರೂ ಸಿಗುತ್ತೆ ಅನ್ನೋದಕ್ಕೆ ಈ ಫೋಟೋವೊಂದು ಕನ್ನಡಿಯಂತಾಗಿದೆ. ದರ್ಶನ್‌ ಅವರ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆದ್ರೆ ದರ್ಶನ್‌ ಅಭಿಮಾನಿಗಳು ಎಂದಿನಂತೆ ಸಮರ್ಥಿಸಿಕೊಂಡಿದ್ದಾರೆ.

ಜೈಲಲ್ಲಿ ನಾಗ-ದರ್ಶನ್ ಭೇಟಿ:
ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ರನ್ನ ವಿಐಪಿ ಸೆಕ್ಯುರಿಟಿ ಸೆಲ್‌-1ನಲ್ಲಿ ಹಾಗೂ ರೌಡಿ ಶೀಟರ್‌ ವಿಲ್ಸನ್‌ಗಾರ್ಡನ್‌ ನಾಗನನ್ನ ಬ್ಯಾರಕ್ 3 ರಲ್ಲಿ ಇರಿಸಲಾಗಿದೆ. ಹೀಗಿದ್ದರೂ ಜೈಲಲ್ಲಿ ದರ್ಶನ್-ನಾಗನ ಭೇಟಿಯಾಗಿದೆ. ಇಬ್ಬರೂ ಜೈಲಲ್ಲಿ ಕೂತು ಕಾಲಹರಣ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೇ ದರ್ಶನ್‌ಗೆ ಆರಂಭದಿಂದಲೂ ಜೈಲಲ್ಲಿ ರಾಜಾತೀಥ್ಯ ನೀಡಲಾಗುತ್ತಿದೆ ಎಂಬ ಆರೋಪವೂ ಇದೆ. ರೌಡಿ ಶೀಟರ್‌ ನಾಗನೇ ದರ್ಶನ್‌ ರಾಜಾತಿಥ್ಯಕ್ಕೆ ಉಸ್ತುವಾರಿಯಾಗಿದ್ದಾನೆ. ಸಾಮಾನ್ಯ ಕೈದಿಗಳಿಗೆ ಒಂದು ರೀತಿಯ ಊಟ ಇದ್ದರೆ, ನಟ ದರ್ಶನ್‌ಗೆ ಅಂತಾನೇ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. ಬಿಸಿ ನೀರು, ಮೊಟ್ಟೆ, ಹಾಲು, ಸಿಗರೇಟ್, ಮಲಗೋಕೆ ವಿಶೇಷ ಹಾಸಿಗೆ ಕೂಡ ವ್ಯವಸ್ಥೆ ಮಾಡಲಾಗಿದೆ. ನೆಪ ಮಾತ್ರಕ್ಕೆ ಕೋರ್ಟ್‌ಗೆ ಮನೆ ಊಟ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು ಎಂದು ಉತ್ತನ ಮೂಲಗಳು ತಿಳಿಸಿವೆ.

ಎಲ್ಲಿ ಬೇಕಾದ್ರೂ ತಿರುಗಾಡಬಹುದಿತ್ತಂತೆ:
ವಿಐಪಿ ಸೆಲ್‌ನಲ್ಲಿದ್ದರೂ ನಟ ದರ್ಶನ್‌ ಮತ್ತು ವಿಲ್ಸನ್‌ ಗಾರ್ಡನ್‌ ನಾಗ ಎಲ್ಲಿ ಬೇಕಾದರೂ ತಿರುಗಾಡಬಹುದಿತ್ತಂತೆ. ಜೊತೆಗೆ ಕೆಲ ಕೈದಿಗಳನ್ನೂ ದರ್ಶನ್‌ ಸಹಾಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜೈಲಾಧಿಕಾರಿಗಳು ಯಾರೂ ಕೂಡ ಪ್ರಶ್ನೆ ಮಾಡುತ್ತಿರಲಿಲ್ಲ ಎಂಬ ರಹಸ್ಯಗಳೂ ಮೂಲಗಳಿಂದ ತಿಳಿದುಬಂದಿವೆ.

Share This Article