ಯತ್ನಾಳ್ ನಮ್ಮ ಸಮುದಾಯದ ನಾಯಕ, ಬಲಿಪಶು ಆಗ್ಬಾರ್ದು: ರೇಣುಕಾಚಾರ್ಯ ಸಾಫ್ಟ್ ಕಾರ್ನರ್

Public TV
2 Min Read

ಬಳ್ಳಾರಿ: ಯತ್ನಾಳ್ ನಮ್ಮ ಸಮುದಾಯದ ನಾಯಕ. ಅವರ ಮುಖಾಂತರ ಕೆಲವರು ಮಾತನಾಡಿಸ್ತಿದ್ದಾರೆ. ಅವರು ಬಲಿಪಶು ಆಗಬಾರದು ಅನ್ನೋದು ನಮ್ಮ ಉದ್ದೇಶ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M P Renukacharya) ಯತ್ನಾಳ್ ಪರ ಬ್ಯಾಟಿಂಗ್ ಮಾಡಿದರು.

ಅವಕಾಶ ಸಿಕ್ಕರೆ ಸಾಕು ಅಂತಾ, ಅವಕಾಶ ಸಿಕ್ಕಾಗಲೆಲ್ಲಾ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಹರಿಹಾಯ್ತಿದ್ದ ರೇಣುಕಾಚಾರ್ಯ ಇದೀಗ ಯತ್ನಾಳ್ ಪರ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ. ಇದನ್ನೂ ಓದಿ: ಚಂದನ್‌ ಶೆಟ್ಟಿ ಅಪ್ಪುಗೆಯ ಬಗ್ಗೆ ʻಮುದ್ದು ರಾಕ್ಷಸಿʼ ಏನಂದ್ರು?

ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲೆಲ್ಲಾ ನಾನು ಯತ್ನಾಳ್ ಚೆನ್ನಾಗಿದ್ದೇವೆ. ಅವರ ಮೇಲೆ ಈಗಲೂ ಗೌರವ ಇದೆ. ಆದರೆ ಕೆಲವು ದುಷ್ಟ ಶಕ್ತಿಗಳು ನಮ್ಮನ್ನ ದೂರ ಮಾಡಿದ್ವು. ಷಡ್ಯಂತ್ರ ಮಾಡಿದವರಿಗೆ ಉತ್ತರ ಕೊಡಬೇಕಿದೆ. ಅವರನ್ನ ಬಲಿಪಶು ಮಾಡ್ತಿದ್ದಾರೆ. ಯತ್ನಾಳ್ ನಮ್ಮ ಶತ್ರು ಅಲ್ಲ ಎಂದರು. ಇದನ್ನೂ ಓದಿ: ಸಮಾಜ ಇರೋದೇ ಹೀಗೆ.. ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್‌ ಬಗ್ಗೆ ನಿವಿ ಖಡಕ್‌ ಮಾತು

ನಾನು ಬೇಡ ಜಂಗಮ ಸಮುದಾಯದ ಸರ್ಟಿಫಿಕೇಟ್ ತಗೊಂಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ. ನಾನು ಅಸೆಂಬ್ಲಿಯಲ್ಲೂ ಹೇಳಿದ್ದೇನೆ. ನಾನು ವೀರ ಶೈವ ಲಿಂಗಾಯತ ಎಂದು ಬರೆಸಿದ್ದೇನೆ. ನಾನು ಯಾವುದೇ ಬೇಡ ಜಂಗಮ ಸರ್ಟಿಫಿಕೇಟ್ ತಗೊಂಡಿಲ್ಲ. ನನ್ನ ಅಫಿಡವಿಟ್‌ನಲ್ಲಿ ವೀರಶೈವ ಲಿಂಗಾಯತ ಎಂದಿದೆ. ಮಾ. 16ರಂದು ದಾಖಲೆ ಬಿಡುಗಡೆ ಮಾಡುತ್ತೇನೆ. ವೀರಶೈವರು ಒಂದಾದ್ರೆ ಈ ದೇಶವನ್ನ ಆಳುತ್ತಾರೆ. ಆದರೆ ಒಂದಾದರೆ ಮಾತ್ರ ಎಂದು ವೀರೇಂದ್ರ ಹೆಗಡೆ ಅವರು ಹೇಳಿದ್ದರು. ಅದಕ್ಕಾಗಿ ನಾವು ಈಗ ಒಂದಾಗ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: 2020ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರಕಟ – ʻಜಂಟಲ್‍ಮನ್ʼ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ!

ಬಿಎಸ್‌ವೈ ವಿರುದ್ಧ ನನ್ನನ್ನು ಚಾಕೂ ರೀತಿ ಬಳಸಿಕೊಂಡ್ರು:
ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ನನ್ನನ್ನು ಚಾಕೂ ರೀತಿ ಬಳಸಿಕೊಂಡರು. ನನ್ನನ್ನ ರೆಸಾರ್ಡ್ ರಾಜಕಾರಣಕ್ಕೆ ಕಳಿಸಿದರು. ಬಳಿಕ ನನಗೆ ಮನವರಿಕೆ ಆಗಿ ಜ್ಞಾನೋದಯ ಆಯ್ತು. ಆಮೇಲೆ ನಾನು ಯಡಿಯೂರಪ್ಪನವರ ಜೊತೆ ಗಟ್ಟಿಯಾಗಿ ನಿಂತೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಇದನ್ನೂ ಓದಿ: Bengaluru | ಬೇಸಿಗೆಯ ತಾಪಕ್ಕೆ ತಂಪೆರಿದ ವರುಣ – ಬೆಂಗಳೂರಿನ ಹಲವೆಡೆ ಮಳೆಯ ಸಿಂಚನ

ನನ್ನನ್ನ ಬಳಕೆ ಮಾಡಿಕೊಂಡು, ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ರು. ನನ್ನನ್ನ ಬಲಿಪಶು ಮಾಡಿದಂತೆ ಯತ್ನಾಳ್ ಅವರನ್ನ ಎತ್ತಿ ಕಟ್ಟುತ್ತಿದ್ದಾರೆ. ಚಾಕೂ ರೀತಿ ಬಳಸಿಕೊಳುತ್ತಿದ್ದಾರೆ. ಯತ್ನಾಳ್ ಟೀಂ ಅಮಿತ್ ಷಾ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿತಿಕ್ರಿಯಿಸಿದ ಅವರು, ಅಮಿತ್ ಷಾ ಯಾರನ್ನೂ ಕರೆದಿಲ್ಲ. ಯತ್ನಾಳ್ ತಮ್ಮ ವೈಯಕ್ತಿಕ ಕಂಪನಿಗಾಗಿ ಮಾತಾಡ್ತಿದ್ದಾರೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಆಗುವುದಿಲ್ಲ. ಸೂರ್ಯ ಚಂದ್ರ ಎಷ್ಟು ಸತ್ಯವೋ ಈ ವಿಚಾರವೂ ಅಷ್ಟೇ ಸತ್ಯ. ಅವರೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಅವರ ನೇತೃತ್ವದಲ್ಲೇ ಮುಂದೆ ಚುನಾವಣೆ ನಡೆಯುತ್ತದೆ. ಈ ಸರ್ಕಾರ ಅವರ ಅವಧಿ ಪೂರ್ಣಗೊಳಿಸಲ್ಲ. ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

Share This Article