ಸೋನಿಯಾ ಗಾಂಧಿ ನಿವಾಸ ಸಹಿತ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಬಾಡಿಗೆ ಬಾಕಿ – ಆರ್‌ಟಿಐ ಮಾಹಿತಿ ಬಹಿರಂಗ

Public TV
2 Min Read

ನವದೆಹಲಿ: ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ತಮ್ಮ ನಿವಾಸ ಸಹಿತ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಬಾಡಿಗೆ ಕಟ್ಟದೆ ಬಾಕಿ ಇರುವ ಮಾಹಿತಿ ಆರ್‌ಟಿಐ ಮೂಲಕ ಬಹಿರಂಗವಾಗಿದೆ.

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಆರ್‌ಟಿಐಗೆ ನೀಡಿರುವ ಮಾಹಿತಿ ಪ್ರಕಾರ, ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ವಿರುದ್ಧ 12,69,902 ರೂ. ಬಾಡಿಗೆ ಬಾಕಿ ಇದೆ. ಕೊನೆಯ ಬಾರಿಗೆ 2012ರ ಡಿಸೆಂಬರ್‌ನಲ್ಲಿ ಬಾಡಿಗೆ ಪಾವತಿಸಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆ!

ಕಾಂಗ್ರೆಸ್ ಕಚೇರಿ ಜೊತೆ 10 ಜನಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸಕ್ಕೆ 4,610 ರೂ. ಬಾಡಿಗೆ ಬಾಕಿ ಉಳಿದುಕೊಂಡಿದೆ. ಈ ನಿವಾಸದ ಬಾಡಿಗೆಯನ್ನು ಕೊನೆಯ ಬಾರಿ ಕೊನೆಯ 2020ರ ಸೆಪ್ಟೆಂಬರ್‌ನಲ್ಲಿ ಪಾವತಿಸಲಾಗಿದೆ. ಅದೇ ರೀತಿ ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್ ಅವರ ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಬಂಗಲೆ ಸಂಖ್ಯೆ C-ll/109ರ 5,07,911 ರೂ.ಗಳ ಬಾಡಿಗೆ ಬಾಕಿ ಉಳಿದುಕೊಂಡಿದೆ. ಈ ಬಂಗಲೆಗೆ 2013ರ ಆಗಸ್ಟ್‌ನಲ್ಲಿ ಕೊನೆಯಬಾರಿಗೆ ಬಾಡಿಗೆ ಪಾವತಿಸಿರುವುದು ದಾಖಲೆ ಇದೆ. ಇದನ್ನೂ ಓದಿ: ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ವಾಸಿಸಲು ಅವಕಾಶ ನೀಡುವ ವಸತಿ ನಿಯಮಗಳ ಪ್ರಕಾರ ಪ್ರತಿಯೊಂದು ಪಕ್ಷಕ್ಕೂ ಸ್ವಂತ ಕಚೇರಿ ನಿರ್ಮಿಸಲು ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ. 2010ರ ಜೂನ್‍ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ನಿರ್ಮಿಸಲು ದೆಹಲಿಯ 9-ಎ ರೋಸ್ ಅವೆನ್ಯೂದಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷವು 2013ರ ವೇಳೆಗೆ ಅಕ್ಬರ್ ರಸ್ತೆಯ ಕಚೇರಿ ಮತ್ತು ಒಂದೆರಡು ಬಂಗಲೆಗಳನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಖಾಲಿ ಮಾಡದಿದ್ದ ಪರಿಣಾಮ ಸರ್ಕಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಲೋಧಿ ರಸ್ತೆಯ ನಿವಾಸವನ್ನು ಒಂದು ತಿಂಗಳ ಅವಧಿಯಲ್ಲಿ ಖಾಲಿ ಮಾಡುವಂತೆ ನೋಟಿಸ್ ಕಳುಹಿಸಿತ್ತು ಎಂಬ ಮಾಹಿತಿ ಆರ್‌ಟಿಐನಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

ಸೋನಿಯಾ ಗಾಂಧಿ ತೆರಿಗೆ ಪಾವತಿಸದೆ ಇರುವ ಬಗ್ಗೆ ಬಿಜೆಪಿಯ ತಜೀಂದರ್ ಪಾಲ್ ಸಿಂಗ್ ಬಗ್ಗಾ ಸಾಮಾಜಿಕ ಜಾಲತಾಣದ ಮೂಲಕ ವ್ಯಂಗ್ಯವಾಡಿದ್ದಾರೆ. ಸೋನಿಯಾ ಗಾಂಧಿ ಅಧಿಕಾರ ಕಳೆದುಕೊಂಡ ಬಳಿಕ ಹಗರಣಗಳನ್ನು ಮಾಡಲು ಸಾಧ್ಯವಾಗದೆ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸೋನಿಯಾ ಗಾಂಧಿ ಅವರು ಚುನಾವಣೆಯಲ್ಲಿ ಸೋತ ನಂತರ ತಮ್ಮ ಬಾಡಿಗೆಯನ್ನು ಪಾವತಿಸಲು ಅವರಿಂದ ಆಗುತ್ತಿಲ್ಲ. ಇದನ್ನು ಮನಗಂಡು ನಾನು ಅವರಿಗೆ ಸಹಾಯ ಮಾಡಲು ಬಯಸಿದ್ದೇನೆ. ನಾನು ಸಾಮಾಜಿಕ ಜಾಲತಾಣದಲ್ಲಿ #SoniaGandhiReliefFund ಎಂಬ ಅಭಿಯಾನವನ್ನು ಪ್ರಾರಂಭಿಸಿ ಅವರ ಖಾತೆಗೆ 10 ರೂಪಾಯಿಗಳನ್ನು ಕಳುಹಿಸಿದ್ದೇನೆ, ಆಕೆಗೆ ಸಹಾಯ ಮಾಡಲು ಪ್ರತಿಯೊಬ್ಬರನ್ನು ವಿನಂತಿಸುತ್ತೇನೆ, ಎಂದು ಪೋಸ್ಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *