ಖ್ಯಾತ ಗೀತರಚನೆಕಾರ ದೇವ್ ಕೊಹ್ಲಿ ನಿಧನ

Public TV
1 Min Read

ಬಾಜಿಗರ್, ಟ್ಯಾಕ್ಸಿ ನಂಬರ್ ಸೇರಿದಂತೆ ಹಲವಾರು ಬಾಲಿವುಡ್ (Bollywood) ಸಿನಿಮಾಗಳಿಗೆ ಗೀತ ರಚನೆ ಮಾಡಿರುವ ದೇವ್ ಕೊಹ್ಲಿ (Dev Kohli) ನಿಧನರಾಗಿದ್ದಾರೆ. 82ರ ವಯಸ್ಸಿನ ದೇವ್ ಕೊಹ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ದೇವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ (Passed Away) ತ್ಯೆಜಿಸಿದ್ದಾರೆ.

ಅವರು ವಾಸವಿದ್ದ ಲೋಕಂಡವಾಲಾ ಕಾಂಪ್ಲೆಕ್ಸ್ ಜುಪಿಟರ್ ಅಪಾರ್ಟ್ ಮೆಂಟ್ ನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಜೋಗೇಶ್ವರಿ ವೆಸ್ಟ್ ಉಪನಗರ ಒಶಿವಾರ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

 

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ದೇವ್ ಜನಿಸಿದ್ದರು. ಪಾಕಿಸ್ತಾವ ವಿಭಜನೆ ಬಳಿಕ ಅವರ ಕುಟುಂಬ ಡೆಹ್ರಾಡೂನ್ ಸ್ಥಳಾಂತರವಾಗಿತ್ತು. ಸಿನಿಮಾ ರಂಗದಲ್ಲಿ ಕೆಲಸ ಮಾಡುವುದಕ್ಕಾಗಿಯೇ ಅವರು ಮುಂಬೈಗೆ (Mumbai) ಬಂದಿದ್ದರು. ನೂರಾರು ಹಿಟ್ ಹಾಡುಗಳನ್ನು ನೀಡುವ ಮೂಲಕ ದೇವ್ ನೆಚ್ಚಿನ ಸಾಹಿತ್ಯ ರಚನೆಕಾರರು ಆಗಿದ್ದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್