ಸಾಹಿತಿ ಕಮಲಾ ಹಂಪನ ಹೃದಯಾಘಾತದಿಂದ ನಿಧನ

Public TV
1 Min Read

ಬೆಂಗಳೂರು: ಹಿರಿಯ ಲೇಖಕಿ ಕಮಲಾ ಹಂಪನ (89) ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾಜರಾಜೇಶ್ವರಿ ನಗರದ ಮಗಳ ಮನೆಯಲ್ಲಿ ಲೇಖಕಿ ಕೊನೆಯುಸಿರೆಳೆದಿದ್ದಾರೆ. ಅಗ್ರಗಣ್ಯ ಮಹಿಳಾ ಲೇಖಕಿಯಾಗಿದ್ದ ಕಮಲಾ ಹಂಪನ ತನ್ನ ಸಾಹಿತ್ಯಾಭಿಮಾನಿಗಳನ್ನ ಅಗಲಿದ್ದಾರೆ.

ಇಂದು ಸಂಜೆಯವರೆಗೂ ಆರ್.ಆರ್. ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ದರ್ಶನದ ಬಳಿಕ ರಾಮಯ್ಯ ಮೆಡಿಕಲ್ ಕಾಲೇಜಿಗೆ ಕುಟುಂಬಸ್ಥರು ದೇಹದಾನ ಮಾಡಲಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಅನೇಕ ಪುಸ್ತಕಗಳ ಕೊಡುಗೆ ನೀಡಿ ಕನ್ನಡ ಸಾಹಿತ್ಯ ಸೇವೆಗೆ ಮನೆ ಮಾತಾಗಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೂ ಆಗಿದ್ದ ಡಾ. ಕಮಲಾ ಹಂಪನ ಸಾಹತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿಗೆ ಲೇಖಕಿ ಭಾಜನರಾಗಿದ್ದರು. ಇವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ.

Share This Article