ಖ್ಯಾತ ಹೃದಯ ಶಸ್ತ್ರಚಿಕಿತ್ಸಕ, ಪದ್ಮವಿಭೂಷಣ ಪ್ರೊ. ಎಂಎಸ್ ವಲಿಯಥಾನ್ ನಿಧನ

Public TV
1 Min Read

ಉಡುಪಿ: ಮಣಿಪಾಲ್ ವಿಶ್ವವಿದ್ಯಾಲಯದ (Manipal University) ವಿಶ್ರಾಂತ ಉಪಕುಲಪತಿ, ಪದ್ಮವಿಭೂಷಣ ಪ್ರೊ. ಮಾರ್ತಾಂಡ ವರ್ಮ ಶಂಕರನ್ ಡಾ.ವಲಿಯಥಾನ್ (90) ಅವರು ನಿಧನರಾಗಿದ್ದಾರೆ.

ವಲಿಯಥಾನ್ (Pro. Valiathan) ಅವರು ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ವೈದ್ಯಕೀಯ ತಂತ್ರಜ್ಞರಾಗಿದ್ದರು. ಅವರು ತಮ್ಮ 90ನೇ ವಯಸ್ಸಿನ ಇಹಲೋಕ ತ್ಯಜಿಸಿದ್ದಾರೆ.‌ ಇದನ್ನೂ ಓದಿ: ಸಿದ್ದರಾಮಯ್ಯ – ಅಶ್ವಥ್ ನಾರಾಯಣ್‌ ನಡುವೆ ಏಕವಚನ, ಮಾತಿನ ಚಕಮಕಿ; ಸದನದಲ್ಲಿ ಕೋಲಾಹಲ!

ತಿರುವನಂತಪುರದ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಇವರು, ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರ್ಗ್, ಇಂಗ್ಲೆಂಡ್ ಮತ್ತು ಕೆನಡಾದಿಂದ ಫೆಲೋಶಿಪ್ ಪಡೆದಿದ್ದರು. ತಿರುವನಂತಪುರದಲ್ಲಿ ಶ್ರೀ ಚಿತ್ರ ತಿರುನಾಳ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇಪ್ಪತ್ತು ವರ್ಷಗಳ ಕಾಲ ಹೃದಯ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 1993 ರಿಂದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಯ ಮೊದಲ ಉಪಕುಲಪತಿಯಾಗಿದ್ದರು. ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನ ಹಂಟೇರಿಯನ್ ಪ್ರೊಫೆಸರ್‌ಶಿಪ್, ಫ್ರೆಂಚ್ ಸರ್ಕಾರದಿಂದ ಚೆವಲಿಯರ್ ಆಫ್ ದಿ ಆರ್ಡರ್ ಆಫ್ ಪಾಮ್ಸ್ ಅಕಾಡೆಮಿಕ್ಸ್, ಜಾನ್ಸ್ ಹಾಪ್ಕಿನ್ಸ್ ವಿವಿಯಿಂದ ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣಕ್ಕಾಗಿ ಡಾ. ಸ್ಯಾಮ್ಯುಯೆಲ್ ಪಿ. ಆಸ್ಪರ್ ಪ್ರಶಸ್ತಿ, ಭಾರತೀಯ ವೈದ್ಯಕೀಯ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿ ಇವರಿಗೆ ಸಂದಿದೆ. ಇದನ್ನೂ ಓದಿ: 7 ದಿನಗಳ ಕಾಲ ಜಿ.ಟಿ ಮಾಲ್ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ

ಪದ್ಮವಿಭೂಷಣ (2005), ಪದ್ಮಶ್ರೀ (2002), ಡಾ. ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿಗಳಿಗೂ ವಲಿಯಥಾನ್ ಅವರು ಭಾಜನರಾಗಿದ್ದಾರೆ.

Share This Article