ಖ್ಯಾತ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

By
1 Min Read

ಭಾರತೀಯ ಸಿನಿಮಾ ರಂಗದ ಹೆಸರಾಂತ ನಟಿ, ಒಂದು ಕಾಲದಲ್ಲಿ ಬಾಲಿವುಡ್ ಕ್ವೀನ್ ಎಂದೇ ಖ್ಯಾತರಾಗಿದ್ದ ಆಶಾ ಪರೇಖ್ ಅವರಿಗೆ 52ನೇ ದಾದಾ ಸಾಹೇಬ್ ಫಾಲ್ಕೆ (Dada Saheb Phalke) ಪ್ರಶಸ್ತಿ ಘೋಷಣೆಯಾಗಿದೆ. ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಆಶಾ ಅವರನ್ನು ಈ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಈ ಅತ್ಯುನ್ನತ ಗೌರವವನ್ನು ‘ದಾದಾ ಸಾಹೇಬ್ ಫಾಲ್ಕೆ’ ಹೆಸರಿನಲ್ಲಿ ಕೊಡಲಾಗುತ್ತದೆ. ಕಳೆದ ಬಾರಿ ಈ ಗೌರವವು ರಜನಿಕಾಂತ್ (Rajinikanth) ಅವರಿಗೆ ಸಂದಿತ್ತು. ಈ ಬಾರಿ ಆಶಾ ಅವರಿಗೆ ದೊರೆತಿದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿಕೆಯನ್ನು ಎಎನ್ಐ ಸಂಸ್ಥೆಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

1952ರಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಆಶಾ ಪರೇಖ್ (Asha Parekh), ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ದಿಲ್ ದೇಕೆ ದೇಖೋ ಇವರು ನಾಯಕಿಯಾಗಿ ನಟಿಸಿದ್ದ ಮೊದಲ ಸಿನಿಮಾ. ಆಂದೋಲನ್ ಸಿನಿಮಾದಲ್ಲಿ ಕೊನೆಯ ಬಾರಿಗೆ ನಟಿಸಿ, ಅಲ್ಲಿಂದ ಸಿನಿಮಾ ರಂಗದಿಂದಲೇ ದೂರವಾದವರು. 79ರ ವಯಸ್ಸಿನ ಈ ನಟಿ ಇವತ್ತಿಗೂ ಸಿನಿಮಾ ರಂಗದ ಬಗ್ಗೆ ಅಷ್ಟೇ ಪ್ರೀತಿ, ಒಲವು ಇಟ್ಟುಕೊಂಡಿದ್ದಾರೆ.

ಭಾರತದ ಅತ್ಯುನ್ನತ ಸಿನಿಮಾ ಪ್ರಶಸ್ತಿಯಾಗಿರುವ ಈ ಗೌರವವು ಕನ್ನಡದ ಡಾ.ರಾಜ್ ಕುಮಾರ್ (Raj Kumar) ಅವರಿಗೂ ದೊರೆತಿದೆ. ಅಲ್ಲದೇ, ವಿನೋದ್ ಖನ್ನಾ, ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ದಿಗ್ಗಜರು ಈ ಗೌರವವಕ್ಕೆ ಪಾತ್ರರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *