ಪಠ್ಯದಲ್ಲಿ ಅನವಶ್ಯಕ ವಿಷಯವನ್ನು ತೆಗೆದುಹಾಕುತ್ತೇವೆ: ಸತೀಶ್ ಜಾರಕಿಹೊಳಿ

By
1 Min Read

ಬೆಳಗಾವಿ: ನಾವು ಮೊದಲಿನಿಂದಲೂ ಹೊಸ ಶಿಕ್ಷಣ ನೀತಿಯನ್ನು (NEP) ವಿರೋಧಿಸಿಕೊಂಡೇ ಬಂದಿದ್ದೇವೆ. ಈಗಲೂ ವಿರೋಧಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಮ್ಮ ಪಕ್ಷ ಎನ್‌ಇಪಿಯನ್ನು ವಿರೋಧಿಸಿಕೊಂಡೇ ಬಂದಿದೆ. ಈಗ ನಮ್ಮ ಸರ್ಕಾರವೇ ಅಸ್ತಿತ್ವಕ್ಕೆ ಬಂದಿದೆ. ನಾವೇ ಈಗ ಎನ್‌ಇಪಿ ತೆಗೆಯಬೇಕು. ಅದಕ್ಕಾಗಿ ಶಿಕ್ಷಣ ತಜ್ಞರ ಸಮಿತಿ ರಚಿಸಬೇಕಾಗುತ್ತದೆ. ಸಿಎಂ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್

ಪಠ್ಯ ಕೇಸರಿಕರಣ ಆಗುತ್ತಿದೆ ಎಂಬ ಚರ್ಚೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪಠ್ಯದಲ್ಲಿ (Textbook) ಅನವಶ್ಯಕ ವಿಷಯವನ್ನು ತೆಗೆದುಹಾಕುತ್ತೇವೆ. ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಹೊಸ ಪಠ್ಯ ಸೇರ್ಪಡೆ, ತೆಗೆದುಹಾಕುವ ಪ್ರಕ್ರಿಯೆ ನಡೆಯಲಿದೆ ಎಂದರು. ಇದನ್ನೂ ಓದಿ: ಮನೆಗೆ ಅತ್ತೆಯೇ ಸಿನಿಯರ್, ಅತ್ತೆ ಒಪ್ಪಿದ್ರಷ್ಟೇ ಸೊಸೆಗೆ 2,000 – ಲಕ್ಷ್ಮಿ ಹೆಬ್ಬಾಳ್ಕರ್

Share This Article