ಬೆಳ್ಳಂಬೆಳಗ್ಗೆ ಮುರುಡೇಶ್ವರ ಕಡಲ ತೀರದಲ್ಲಿ ಕಾರ್ಯಾಚರಣೆ – ಅಕ್ರಮ ವಾಣಿಜ್ಯ ಮಳಿಗೆ ತೆರವು

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವಿಶ್ವವಿಖ್ಯಾತ ಮುರುಡೇಶ್ವರ ಕಡಲ ತೀರದಲ್ಲಿ CRZ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಗ್ರಾಮಪಂಚಾಯ್ತಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ತೆರವುಗೊಳಿಸುವ ಕಾರ್ಯಾಚರಣೆಗಿಳಿದಿದ್ದಾರೆ.

ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಕಡಲ ತಡಿಯಲ್ಲೇ ನಿರ್ಮಾಣವಾಗಿದ್ದ ವಾಣಿಜ್ಯ ಮಳಿಗೆಯನ್ನು ತೆರವುಗೊಳಿಸಲಾಯಿತು. ಕಳೆದ 19 ದಿನದಿಂದ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು.

ಈ ಕುರಿತು ಭಟ್ಕಳ ಎಸಿ ಡಾ.ನಯನಾ ಅವರು ಆದೇಶ ಮಾಡಿದ್ದರು‌. ಇನ್ನು ಕಡಲ ತೀರಕ್ಕೆ ನಿರ್ಬಂಧ ತೆರವುಗೊಳಿಸಲು ಸ್ಥಳೀಯ ಜನರ ಒತ್ತಡವು ಹೆಚ್ಚಾಗಿತ್ತು. ಆದರೆ, ಅಧಿಕಾರಿಗಳ ಸಮನ್ವಯ ಕೊರತೆ ಹಿನ್ನೆಲೆಯಲ್ಲಿ ನಿರ್ಬಂಧ ತೆರವುಗೊಳಿಸಿರಲಿಲ್ಲ.

ಇದೀಗ ಜಿಲ್ಲಾಧಿಕಾರಿ ಆದೇಶ ಬೆನ್ನಲ್ಲೇ CRZ ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

Share This Article