ಕೊಡಗಿನಲ್ಲೂ ಹೊತ್ತಿದ ಧರ್ಮದ ಕಿಡಿ – ಮುಸ್ಲಿಂ ವ್ಯಾಪಾರಸ್ಥ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ

Public TV
1 Min Read

ಮಡಿಕೇರಿ: ರಾಜ್ಯದ ವಿವಿಧೆಡೆ ಈಗಾಗಲೇ ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಘಟನೆ ಹಾಗೂ ಭಜರಂಗದಳದ ಪ್ರಮುಖಕರು ಅಗ್ರಹ ಪಡಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ಕೋಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆಯಲ್ಲಿ ಇದೀಗಾ ಧರ್ಮದ ಕಿಡಿ ಕೊಡಗು ಜಿಲ್ಲೆಗೂ ವಿಸ್ತರಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮನೆಹಳ್ಳಿ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಇದ್ದ ಭಜರಂಗದಳದ ಯುವಕರು ಮುಸ್ಲಿಂ ಸಮುದಾಯದವರು ವ್ಯಾಪಾರಕ್ಕೆ ಹಾಕಿದ ಅಂಗಡಿ ಖಾಲಿ ಮಾಡಿಸಿದ್ರು. ಇದನ್ನೂ ಓದಿ:  ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ – ಸಚಿವ ಮುಖೇಶ್ ನಾಮಫಲಕ ನಾಪತ್ತೆ

ಸಮ್ಮೇಳನದ ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಮುಸ್ಮಿಮರು ಟಾಯ್ಸ್, ಕಬ್ಬಿನ ಹಾಲು ಮತ್ತು ತಿಂಡಿ ತಿನಿಸುಗಳ ಅಂಗಡಿ ಹಾಕಿದ್ದ ಮುಸ್ಲಿಂರ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದ್ರು. ಅಲ್ಲದೇ ಗೋವುಗಳ ಕಡಿದು ತಿನ್ನುವ ಅವರು ಗೋ ಸಮ್ಮೇಳನಕ್ಕೆ ಯಾಕೆ ಬರಬೇಕು. ಗೋವುಗಳ ಕಡಿದು ತಿನ್ನುವವರಿಗೆ ಇಲ್ಲಿ ವ್ಯಾಪಾರ ಮಾತ್ರ ಬೇಕಾ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭ ಭಜರಂಗದಳದ ಸೋಮವಾರಪೇಟೆ ತಾಲೂಕು ಸಂಚಾಲಕ ಜೀವನ್ ಮಾತಾನಾಡಿದ್ದು, ಹಿಂದೂಗಳು ಜಾತ್ರೆ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಮುಸ್ಲಿಮರು ಪಾಲ್ಗೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇವರು ನಡೆಸುವ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಳ್ಳಲಿ. ಆದ್ರೆ ನಮ್ಮ ಕಾರ್ಯಕ್ರಮಗಳಲ್ಲಿ ಅವರು ಬರುವುದು ಬೇಡ. ಇದು ಅವರಿಗೆ ಎಚ್ಚರಿಕೆ ಗಂಟೆ ಎಂದು ತಿಳಿಸಿದರು. ಇದನ್ನೂ ಓದಿ:  ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

Share This Article
Leave a Comment

Leave a Reply

Your email address will not be published. Required fields are marked *