ಮೆಗಾ ಸಿಟಿ ಪ್ರಾಜೆಕ್ಟ್‌ ಕೇಸಲ್ಲಿ ಕಾಂಗ್ರೆಸ್‌ ಶಾಸಕ ಸಿ.ಪಿ.ಯೋಗೇಶ್ವರ್‌ಗೆ ಬಿಗ್‌ ರಿಲೀಫ್‌

0 Min Read

ಬೆಂಗಳೂರು: ಮೆಗಾ ಸಿಟಿ ಪ್ರಾಜೆಕ್ಟ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸಿ.ಪಿ.ಯೋಗೇಶ್ವರ್‌ಗೆ (C.P.Yogeshwar) ಬಿಗ್‌ ರಿಲೀಫ್‌ ಸಿಕ್ಕಿದೆ. ಯೋಗೇಶ್ವರ್‌ ಸೇರಿ 6 ಆರೋಪಿಗಳನ್ನು ಪ್ರಕರಣದಿಂದ ಕೋರ್ಟ್‌ ಖುಲಾಸೆ ಮಾಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಪ್ರಕರಣದ ವಿಚಾರಣೆ ನಡೆಸಿತು. ನ್ಯಾ. ಕೆ.ಎನ್.ಶಿವಕುಮಾರ್ ಅವರು ತೀರ್ಪು ಪ್ರಕಟಿಸಿದ್ದಾರೆ.

ಮೆಗಾ ಸಿಟಿ ಪ್ರಾಜೆಕ್ಟ್‌ ವಂಚನೆ ಆರೋಪದಲ್ಲಿ 9 ಕೇಸ್‌ಗಳಿದ್ದವು. ಈ ಹಿಂದೆ 3 ಕೇಸ್‌ಗಳಲ್ಲಿ ಯೋಗೇಶ್ವರ್‌ ಖುಲಾಸೆ ಆಗಿದ್ದರು. ಇದೀಗ ಮತ್ತೆ ಎರಡು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಇನ್ನೂ 4 ಪ್ರಕರಣಗಳು ಕೋರ್ಟ್‌ನಲ್ಲಿ ಬಾಕಿಯಿವೆ.

Share This Article