ಗ್ರಾಹಕರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸಂಗ್ರಹ ನೀಡಲಿದೆ ರಿಲಯನ್ಸ್ ಜಿಯೋ

Public TV
2 Min Read

ಮುಂಬೈ: ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಬಂಪರ್ ಆಫರ್ ತಂದಿದೆ. ಶೀಘ್ರದಲ್ಲೇ ಕಂಪನಿಯು ತನ್ನ ಗ್ರಾಹಕರಿಗೆ 100 ಜಿಬಿ ತನಕ ಉಚಿತ ಕ್ಲೌಡ್ ಸಂಗ್ರಹವನ್ನು ನೀಡುತ್ತದೆ. ಫೋಟೋಗಳು, ವೀಡಿಯೋಗಳು ಅಥವಾ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಬಹುದು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 47ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (Reliance AGM 2024) ಗುರುವಾರ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಈ ಮಾಹಿತಿಯನ್ನು ನೀಡಿದ್ದಾರೆ. ಕೆಲವು ಜಿಬಿಯಷ್ಟು ಸಂಗ್ರಹವನ್ನು ಉಚಿತವಾಗಿ ನೀಡಿದ ನಂತರ ಗೂಗಲ್ ಮತ್ತು ಇತರ ಕಂಪನಿಗಳು ಕ್ಲೌಡ್ ಸಂಗ್ರಹಣೆಗೆ ಶುಲ್ಕ ವಿಧಿಸುತ್ತವೆ. ಇದನ್ನೂ ಓದಿ: Telegram Ban | ಭಾರತದಲ್ಲಿ ಬ್ಯಾನ್ ಆಗುತ್ತಾ ಟೆಲಿಗ್ರಾಂ ಆ್ಯಪ್?

ಅಲ್ಲದೆ, ಜಿಯೋ ಬ್ರೈನ್ ಶೀಘ್ರದಲ್ಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಕನೆಕ್ಟೆಡ್ ಇಂಟೆಲಿಜೆನ್ಸ್ ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ಬರುತ್ತದೆ. ಕಂಪನಿಯು ಇದನ್ನು ‘ಎಐ ಎವೆರಿವೇರ್ ಫಾರ್ ಎವರಿಒನ್’ ಎಂಬ ಥೀಮ್ ಮೇಲೆ ಪ್ರಾರಂಭಿಸುತ್ತದೆ.

ಜಿಯೋ ಸಂಪೂರ್ಣ ಎಐ ಅನ್ನು ಒಳಗೊಂಡ ಪರಿಕರಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಸಮಗ್ರ ಸೂಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ‘ಜಿಯೋ ಬ್ರೈನ್’ ಎಂದು ಕರೆಯಲಾಗುತ್ತದೆ. ‘ರಿಲಯನ್ಸ್‌ ಜಿಯೋ ಬ್ರೈನ್ ಅನ್ನು ಗಟ್ಟಿಗೊಳಿಸುವ ಮೂಲಕ ನಾವು ಶಕ್ತಿಯುತ ಎಐ ಸೇವೆಗಳ ಪ್ಲಾಟ್‌ಫಾರ್ಮ್ ರೂಪಿಸುತ್ತೇವೆ ಎಂಬುದಾಗಿ ನಾನು ಭಾವಿಸುತ್ತೇನೆ’ ಎಂದು ಅಂಬಾನಿ ಹೇಳಿದರು. ನಾವು ಜಾಮ್‌ನಗರದಲ್ಲಿ ಗಿಗಾವ್ಯಾಟ್-ಪ್ರಮಾಣದ ಎಐ- ಸಿದ್ಧ ಡೇಟಾ ಕೇಂದ್ರವನ್ನು ಸ್ಥಾಪಿಸಲು ಯೋಜಿಸಿದ್ದೇವೆ. ಇದು ಸಂಪೂರ್ಣವಾಗಿ ರಿಲಯನ್ಸ್‌ನ ಹಸಿರು ಶಕ್ತಿಯಿಂದ ಚಾಲಿತವಾಗುತ್ತದೆ. ಭಾರತದಲ್ಲಿಯೇ ವಿಶ್ವದ ಅತ್ಯಂತ ಕೈಗೆಟುಕುವ ಎಐ ಇಂಟರ್ ಫೇಸಿಂಗ್ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ‘ಇದು ಭಾರತದಲ್ಲಿ ಎಐ ಅಪ್ಲಿಕೇಷನ್‌ಗಳನ್ನು ಹೆಚ್ಚು ಕೈಗೆಟುಕುವಂತೆ ಮತ್ತು ಎಲ್ಲರಿಗೂ ಸಂಪರ್ಕ ಸಿಗುವಂತೆ ಮಾಡುತ್ತದೆ’ ಎಂದರು.

ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹಲವಾರು ಹೊಸ ಎಐ ಸೇವೆಗಳನ್ನು ಘೋಷಿಸಿದ್ದಾರೆ. ಇದು ಜಿಯೋ ಟಿವಿಒಎಸ್ (Jio TVOS), ಹಲೋಜಿಯೋ (HelloJio), ಜಿಯೋ ಐಒಟಿ ಸಲ್ಯೂಷನ್ (Jio Home IoT), ಜಿಯೋ ಹೋಮ್ (JioHome) ಅಪ್ಲಿಕೇಷನ್ ಮತ್ತು ಜಿಯೋ ಫೋನ್ ಕಾಲ್ ಎಐ (Jio Phonecall AI) ಅನ್ನು ಒಳಗೊಂಡಿದೆ. ಇದನ್ನೂ ಓದಿ: ಕೀಬೋರ್ಡ್‌ನಲ್ಲಿ ಡಾಲರ್ ಬದಲು ರುಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ

Share This Article