ಬೀದರ್ ನಲ್ಲಿ 150 ಕಡುಬಡವರಿಗೆ ಸಿಕ್ಕಿತು ಎಮ್ಮೆ ಭಾಗ್ಯ

Public TV
1 Min Read

ಬೀದರ್: ಕಡು ಬಡವರ ಜೀವನದಲ್ಲಿ ಆಶಾಕಿರಣ ಮೂಡಿಸಲು ಸಲುವಾಗಿ ರಿಲ್ಯಾನ್ಸ್ ಪೌಂಡೇಶನ್ ಸಹಯೋಗದಲ್ಲಿ ಸುಮಾರು 150 ಬಡವರಿಗೆ ಎಮ್ಮೆ ಭಾಗ್ಯ ಸಿಕ್ಕಿದೆ.

ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಎಂ ಗ್ರಾಮದಲ್ಲಿ ರಿಲಾಯನ್ಸ್ ಪೌಂಡೇಶನ್ ಸಹಯೋಗದಲ್ಲಿ `ಬಸವೇಶ್ವರ ರೈತ ಸಂಘ’ ಗ್ರಾಮದ ಜನರ ಒಳಿತಿಗಾಗಿ ದುಡಿಯತ್ತಿದೆ. ರೈತ ಸಂಘದಿಂದ 16 ಗ್ರಾಮಗಳಲ್ಲಿ ಈ ವರ್ಷ 150 ಜನರನ್ನು ಕಡು ಬಡವರೆಂದು ಗುರುತು ಮಾಡಿದ್ದು, ಅವರಿಗೆ ಎಮ್ಮೆ ನೀಡಿ ಜೀವನ ರೂಪಿಸಲು ಸಹಕಾರಿಯಾಗಿದೆ.

ನಾಗೂರು ಎಂ, ನಾಗೂರು ಎನ್, ಕಾಶೆಂಪೂರು, ಕಪ್ಪೆಕೇರಿ, ನವಲಾಸಪೂರು, ವಿಲಾಸಪೂರು, ಜೈನಾಪೂರು, ಸಿದ್ದಿಪೂರು, ದದ್ದಿಪೂರು, ಪತ್ತೆಪೂರು, ಕಾಜಾಪೂರು ಹೀಗೇ 16 ಗ್ರಾಮಗಳ ಕಡು ಬಡವರಿಗೆ ಈ ಯೋಜನೆಯನ್ನು ನೀಡಿದ್ದಾರೆ. ಗ್ರಾಮದ ಎಲ್ಲಾ ಜನರು ಸಮಾನರಾಗಿರಬೇಕು ಎಂಬ ದೃಷ್ಟಿಯಿಂದ ಕಡು ಬಡವರು ಆರ್ಥಿಕ ಸಮತೋಲನವನ್ನು ಕಾಣಲಿ ಎಂಬ ಉದ್ದೇಶದಿಂದ ಈ ಎಮ್ಮೆ ಭಾಗ್ಯವನ್ನು ನೀಡಿದ್ದಾರೆ ಎನ್ನುವುದು ಸ್ಥಳೀಯರ ಮಾತಾಗಿದೆ.

ಜನರಿಗೆ ಎಮ್ಮೆ ಭಾಗ್ಯ ಅಷ್ಟೇ ಅಲ್ಲದೇ ಕೋಳಿ ಭಾಗ್ಯ, ಕುರಿಭಾಗ್ಯ, ಮೇಕೆಭಾಗ್ಯ, ಕತ್ತೆಭಾಗ್ಯ ಹೀಗೆ ಹತ್ತು ಹಲವಾರು ಭಾಗ್ಯಗಳನ್ನು ರಿಲ್ಯಾನ್ಸ್ ಪೌಂಡೇಶನ್ ಕಡು ಬಡವರಿಗೆ ನೀಡಲು ಸಿದ್ಧವಾಗಿದೆ. ಬಡವರ ಸಂಪತ್ತನ್ನು ಕಿತ್ತುಕೊಂಡು ತಿನ್ನುತ್ತಿರುವ ಈ ದಿನಗಳಲ್ಲಿ ರೈತ ಸಂಘಟನೆ ಗಡಿ ಭಾಗದಲ್ಲಿರುವ ಕಡು ಬಡವರಿಗಾಗಿ ಈ ರೀತಿ ಯೋಜನೆಗಳನ್ನು ನಿರೂಪಿಸಿದ್ದು ಮಾತ್ರ ಸಂತೋಷದ ಸಂಗತಿಯಾಗಿದೆ.

ಹೀಗಾಗಲೇ 16 ಗ್ರಾಮಗಳಲ್ಲಿ 150 ಜನಕ್ಕೆ ಈ ಯೋಜನೆಯ ಲಾಭ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನು ಹತ್ತಾರು ಗ್ರಾಮಗಳಿಗೆ ಅನುಷ್ಠಾನ ಮಾಡುವ ಉದ್ದೇಶವಿದೆ. ಬಜೆಟ್‍ನಲ್ಲಿ ಮೈತ್ರಿ ಸರ್ಕಾರ ಸಾಲ ಮನ್ನಾ ಮಾಡಿದ್ದು, ರೈತರು ಕೊಂಚ ನೀರಾಳವಾಗಿದ್ದಾರೆ. ಈ ರೀತಿ ವಿಭಿನ್ನ ಯೋಜನೆ ಹಾಕಿಕೊಂಡರೆ ರೈತರ ಬೆಳವಣೆಗೆಯಾಗುತ್ತದೆ. ರಿಲ್ಯಾನ್ಸ್ ಪೌಂಡೇಶನ್ ವತಿಯಿಂದಾಗಿ ಬಸವೇಶ್ವರ ರೈತ ಸಂಘ ನಮಗೂ ಎಮ್ಮೆಯನ್ನು ನೀಡಿದ್ದು, ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *