ಆರ್‌ಟಿಪಿಎಸ್ ನೆಪದಲ್ಲಿ ತೆಲಂಗಾಣಕ್ಕೆ ಕರ್ನಾಟಕದ ನೀರು – ರೈತರ ಆಕ್ರೋಶ

By
1 Min Read

ರಾಯಚೂರು: ರಾಜ್ಯದ ಜನರಿಗೆ ಸಿಗಬೇಕಾದ ನೀರು ಅನಾಯಾಸವಾಗಿವಾಗಿ ತೆಲಂಗಾಣ ಪಾಲಾಗುತ್ತಿದೆ. ಆರ್‌ಟಿಪಿಎಸ್‌ಗೆ ನೀರು ಒದಗಿಸುವ ನೆಪದಲ್ಲಿ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ (Krishna River) ಬಿಡುಗಡೆ ಮಾಡಿರುವ ನೀರು ತೆಲಂಗಾಣಕ್ಕೆ ಹೋಗುತ್ತಿದೆ ಅಂತ ರಾಯಚೂರಿನ ರೈತರು (Raichur Farmers) ಆಕ್ರೋಶ ಹೊರಹಾಕಿದ್ದಾರೆ.

ತೆಲಂಗಾಣದಲ್ಲಿ (Telangana) ಚುನಾವಣೆ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಕೃಷ್ಣಾ ನದಿಗೆ ನೀರು ಹರಿಸುತ್ತಿದೆ ಅಂತ ರೈತರು ಆರೋಪಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ರೈತರ ಬೆಳೆಗೆ ನೀರಿನ ಸಮಸ್ಯೆಯಿದ್ದಾಗ ನೀರು ಬಿಡದ ಸರ್ಕಾರ ಈಗ ಯಾಕೆ ನೀರು ಹರಿಸುತ್ತಿದೆ? ಅಂತ ಪ್ರಶ್ನಿಸಿದ್ದಾರೆ.

ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆ ರೈತರ ಬೆಸಿಗೆ ಬೆಳೆಗೆ ನೀರು ಹರಿಸದ ಸರ್ಕಾರ, ಈಗಲೂ ಕಾಲುವೆಗೆ ನೀರು ಹರಿಸದೇ 1.25 ಟಿಎಂಸಿ ಅಡಿ ನೀರು ಕೃಷ್ಣಾ ನದಿಗೆ ಬಿಟ್ಟಿದೆ. ಮೇ 7 ರಿಂದ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ದುಬೈನಲ್ಲಿ ಪ್ರವಾಸಿಗ ಕಳೆದುಕೊಂಡಿದ್ದ ವಾಚ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಭಾರತೀಯ ಹುಡುಗನಿಗೆ ಪ್ರಶಂಸೆ

33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 14 ಟಿಎಂಸಿ ನೀರು ಸಂಗ್ರಹವಿದೆ. ಆರ್‌ಟಿಪಿಎಸ್‌ಗಾಗಿ ರಾಯಚೂರಿನ ಗುರ್ಜಾಪುರ ಬಳಿ ನಿರ್ಮಿಸಿರುವ ಬ್ಯಾರೇಜ್ 0.46 ಟಿಎಂಸಿ ಸಾಮರ್ಥ್ಯ ಹೊಂದಿದೆ. ಆದ್ರೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿರುವುದರಿಂದ ಬ್ಯಾರೇಜ್ ಮೂಲಕ ತೆಲಂಗಾಣ ಭಾಗಕ್ಕೆ ನೀರು ಹರಿಯುತ್ತಿದೆ. ನೀರಿನ ವಿಚಾರದಲ್ಲಿ ಸರ್ಕಾರ ರಾಜಕೀಯ ಮಾಡಬಾರದು ಅಂತ ರೈತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸೈಫ್ ಕೈ ಮೇಲಿದ್ದ ಕರೀನಾ ಟ್ಯಾಟೂ ಮಾಯ- 3ನೇ ಮದುವೆಗೆ ರೆಡಿಯಾದ್ರಾ ಎಂದ ನೆಟ್ಟಿಗರು

Share This Article