ಕಲ್ಟ್ ಸಿನಿಮಾದ ಅಯ್ಯೊ ಶಿವನೇ ಹಾಡಿನ ರಿಲೀಸ್ ಡೇಟ್ ಫಿಕ್ಸ್

By
1 Min Read

ನಾರಸ್ (Banaras) ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” (Cult) ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಝೈದ್ ಖಾನ್, ರಚಿತರಾಮ್ ಹಾಗೂ ಮಲೈಕ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಈಗಾಗಲೇ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಮೊದಲ ಹಾಡು “ಅಯ್ಯೊ ಶಿವನೇ” ಇದೇ ಸೆಪ್ಟೆಂಬರ್ 10 ರಂದು ಆನಂದ್ ಆಡಿಯೋ (Anand Audio) ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅನಿಲ್ ಕುಮಾರ್ ಅವರೇ ಬರೆದಿರುವ ಈ ಹಾಡನ್ನು ಜನಪ್ರಿಯ ಗಾಯಕ – ಗಾಯಕಿ ಜಸ್ಕರಣ್ ಸಿಂಗ್ ಹಾಗೂ ಪೃಥ್ವಿ ಭಟ್ ಹಾಡಿದ್ದಾರೆ.ಇದನ್ನೂ ಓದಿ: ಯಶ್ ನಟನೆಯ ರಾಮಾಯಣ-2 ಚಿತ್ರಕ್ಕೆ VFX ಗಾಗಿ ಗಾಡ್ಜಿಲ್ಲ ತಂತ್ರಜ್ಞರು ಎಂಟ್ರಿ

ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮಲೈಕ ಅಭಿನಯಿಸಿದ್ದಾರೆ. ಈಗಾಗಲೇ ಈ ಮೊದಲ ಹಾಡಿನ ಪ್ರೋಮೋ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಪ್ರೋಮೋದಲ್ಲೇ ಗಮನ ಸೆಳೆದಿರುವ “ಅಯ್ಯೋ ಶಿವನೇ” ಹಾಡನ್ನು ಆಲಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕೆ.ವಿ.ಎನ್ ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ “ಕಲ್ಟ್” ಚಿತ್ರದ ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.ಇದನ್ನೂ ಓದಿ: ಪವನ್ ಕಲ್ಯಾಣ್ ಅಭಿಮಾನಿಗಳಿಂದ ಸರ್ ಎಂ.ವಿಶ್ವೇಶ್ವರಯ್ಯ ವಿದ್ಯಾಭ್ಯಾಸ ಮಾಡಿದ ಶಾಲೆಯ ನವೀಕರಣ

Share This Article