ಕೋರ್ಟ್ ಆದೇಶ ಬಳಿಕ ದರ್ಶನ್‌ಗೆ ರಿಲ್ಯಾಕ್ಸ್ – ದಿಂಬು, ಚಾಪೆ ಜೊತೆಗೆ ಎರಡು ಜಮ್ಖಾನ ನೀಡಿದ ಅಧಿಕಾರಿಗಳು

Public TV
2 Min Read

– ದಿನಕ್ಕೆ 2 ಬಾರಿ ವಾಕಿಂಗ್‌ಗೆ ಅವಕಾಶ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್ (Darshan) ಎರಡನೇ ಬಾರಿ ಜೈಲು ಸೇರಿ 28 ದಿನ ಕಳೆದಿದ್ದಾರೆ. ಇದರ ನಡುವೆ ದರ್ಶನ್‌ಗೆ ಜೈಲಲ್ಲಿ ಇರುವ ಟಫ್ ರೂಲ್ಸ್‌ನಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಮಂಗಳವಾರ ಈ ವಿಚಾರವಾಗಿ ಕೋರ್ಟ್‌ನಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡುವ ಬಗ್ಗೆ ಅಧಿಕೃತವಾಗಿ ಸೂಚನೆ ನೀಡಲಾಗಿದೆ. ಇದರಿಂದ ದರ್ಶನ್ ಕೊಂಚಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ.

ಹೌದು, ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದು, ಸರಿಯಾದ ಹಾಸಿಗೆ, ದಿಂಬು, ಇಲ್ಲದೇ ದರ್ಶನ್ ಜೈಲಲ್ಲಿ ತೊಂದರೆ ಅನುಭವಿಸುತ್ತಿದ್ದರು. ಇದರ ಬಗ್ಗೆ ಮಂಗಳವಾರ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆದಿದ್ದು, ಇದೀಗ ನ್ಯಾಯಾಲಯದಲ್ಲಿ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಹಾಗಾಗಿ ದರ್ಶನ್‌ಗೆ ಇಂದು ಎರಡು ಜಮ್ಖಾನ ಹಾಗೂ ಚಾಪೆ, ದಿಂಬನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ. ಮಂಗಳವಾರ ರಾತ್ರಿ ಕೇಂದ್ರ ಕಾರಾಗೃಹಕ್ಕೆ ಕೋರ್ಟ್ ಆದೇಶದ ಪ್ರತಿ ತಲುಪಿದ್ದು, ಅದರಂತೆ ದರ್ಶನ್‌ಗೆ ತನ್ನ ಸೆಲ್ ಮುಂದೆ ವಾಕಿಂಗ್ ಮಾಡಲು ಅವಕಾಶ ದೊರೆತಿದೆ. ಜೊತೆಗೆ ಎರಡು ಗಟ್ಟಿಯಾದ ಜಮ್ಖಾನ ಒಂದು ಚಾಪೆ ಜೊತೆಗೆ ತಲೆದಿಂಬು ನೀಡಿದ್ದಾರೆ ಜೈಲ್‌ನ ಅಧಿಕಾರಿಗಳು. ಇದನ್ನೂ ಓದಿ: ಅಕ್ರಮ ಗಣಿ ಆಸ್ತಿ ಜಪ್ತಿ ಕಾನೂನಿಗೆ ಅಧಿಕೃತ ಮುದ್ರೆ: ಹೆಚ್.ಕೆ ಪಾಟೀಲ್

ಪ್ರಮುಖವಾಗಿ ದರ್ಶನ್ ಹಾಗೂ ಗ್ಯಾಂಗನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಅರ್ಜಿ ಹಾಕಿದ್ದರು. ಆದರೆ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ದರ್ಶನ್‌ಗೆ ಸ್ವಲ್ಪಮಟ್ಟಿಗೆ ರಿಲೀಫ್ ಎಂದೆ ಹೇಳಬಹುದು. ಇನ್ನು ದರ್ಶನ್ ಸೆಲ್‌ನಲ್ಲಿ ಇದ್ದು ಸೆಕ್ಯೂರಿಟಿ ಬ್ಯಾರಕ್‌ಗೆ ಶಿಫ್ಟ್ ಮಾಡುವ ವಿಚಾರವಾಗಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಟ್ರೈನಿಂಗ್ ಎಂದು ಹೈದರಾಬಾದ್‌ಗೆ ಹೋಗಿದ್ದು, ಶನಿವಾರ ವಾಪಸ್ ಬರಲಿದ್ದಾರೆ. ಅವರು ಬಂದ ನಂತರ ಕ್ವಾರಂಟೈನ್ ಜೈಲಿನಲ್ಲಿ ಮುಂದುವರಿಸುವುದರ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅದಲ್ಲದೆ ದರ್ಶನ್‌ಗೆ ಆರೋಗ್ಯ ಸಮಸ್ಯೆ ಸಹ ಇದ್ದು, ನೆನ್ನೆ ರಾತ್ರಿ ಜೈಲಿನ ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆ ಕೊಡಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ಶಾಸಕ ಸತೀಶ್ ಸೈಲ್ 2 ದಿನ ಇ.ಡಿ ಕಸ್ಟಡಿಗೆ

Share This Article