ಜಾಮೀನು ರದ್ದಾದ ಕಾರಣಕ್ಕೆ ಕೊಲೆ ಆರೋಪಿ ದರ್ಶನ್ ಜೈಲು ಪಾಲಾಗಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ಮುಂಬರುವ ಚಿತ್ರದ ಪ್ರಚಾರವನ್ನೇ ನಿಲ್ಲಿಸಿತ್ತು ಚಿತ್ರತಂಡ. ಆದರೆ ದರ್ಶನ್ ಸಂದೇಶ ಎನ್ನಲಾದ ವಿಜಯಲಕ್ಷ್ಮಿ ಕಡೆಯಿಂದ ಬಂದ ಪೋಸ್ಟ್ ಬಳಿಕ ಅಭಿಮಾನಿಗಳು ಡೆವಿಲ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರುವ ಭರವಸೆ ಹೊಂದಿದರು. ಇದೀಗ ಚಿತ್ರದ ಪ್ರಚಾರ ಪ್ರಕ್ರಿಯೆಯನ್ನು ಪುನಃ ಶುರುಮಾಡಿದೆ ಸಿನಿಮಾ ತಂಡ.
ಬಿಡುಗಡೆ ಮುಂದೂಡಿಕೆ ಆಗಿದ್ದ ಹಾಡಿನ ನಯಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಡೆವಿಲ್ ಟೀಮ್. `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡು ಕಳೆದ ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿತ್ತು. ಇದೀಗ ಆಗಸ್ಟ್ 24ಕ್ಕೆ ಇದೇ ಹಾಡನ್ನ ಬಿಡುಗಡೆ ಮಾಡೋದಾಗಿ ಹೇಳಿ ಹೊಸ ಡೇಟ್ ಅನೌನ್ಸ್ ಮಾಡಿದೆ `ದಿ ಡೆವಿಲ್’ ಚಿತ್ರತಂಡ. ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾ ನಿಂತೋಗುತ್ತಾ ಎಂಬ ಆತಂಕಕ್ಕೆ ವಿಜಯಲಕ್ಷ್ಮಿ ತೆರೆ ಎಳೆದಿದ್ರು. ದರ್ಶನ್‌ರದ್ದೇ ಎನ್ನಲಾದ ಸಂದೇಶವನ್ನ ವಿಜಯಲಕ್ಷ್ಮಿ ಪೋಸ್ಟ್ ಮಾಡಿದಾಗ ಅಭಿಮಾನಿಗಳು ಎಚ್ಚೆತ್ತುಕೊಂಡ್ರು. ಇದೀಗ ಡೆವಿಲ್ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮತ್ತೊಮ್ಮೆ ಕೌಂಡ್‌ಡೌನ್ ಶುರುವಾಗಿದೆ.
ಹಾಡಿನ ಸಾಲುಗಳಿಂದಲೇ ಭಾರೀ ನಿರೀಕ್ಷೆ ಹುಟ್ಟಿಸಿರುವ ಹಾಡಿದು. ಆಗಸ್ಟ್ 24ರ ಬೆಳಗ್ಗೆ 10:05ಕ್ಕೆ ಹಾಡು ರಿಲೀಸ್ ಆಗಲಿದೆ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆಗೆ ದಿನಾಂಕವನ್ನೂ ಚಿತ್ರತಂಡ ಆಫಿಷಿಯಲ್ ಘೋಷಣೆ ಮಾಡಲಿರುವ ಸೂಚನೆ ಇದೆ.